ಕದ್ರಿ ಮಾರುಕಟ್ಟೆಗೆ ವ್ಯಾಪಾರಸ್ಥರ ಸ್ಥಳಾಂತರ: ಐವನ್ ಡಿಸೋಜಾ ಭೇಟಿ; ವ್ಯಾಪಾರಸ್ಥರ ಜತೆ ವಿಚಾರ ವಿನಿಮಯ

ಮಂಗಳೂರು, ಜೂ.3: ಕದ್ರಿಯಲ್ಲಿ ಮಹಾನಗರ ಪಾಲಿಕೆಯಿಂದ ನಿರ್ಮಿಸಲಾಗಿರುವ ನೂತನ ಮಾರುಕಟ್ಟೆಗೆ ವ್ಯಾಪಾರಸ್ಥರು ಸ್ಥಳಾಂತರಗೊಂಡಿದ್ದು, ವಿಧಾನ ಪರಿಷ್ ಶಾಸಕ ಐವನ್ ಡಿಸೋಜಾ ಮಂಗಳವಾರ ಭೇಟಿ ನೀಡಿ ವ್ಯಾಪಾರಸ್ಥರ ಜತೆ ಮಾತುಕತೆ ನಡೆಸಿ ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಹಾಗೂ ಈ ಬಗ್ಗೆ ಸಭೆ ನಡೆಸಲು ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳಿಗೆ ಸಲಹೆ ನೀಡಿದರು.
ಕದ್ರಿ ಮಾರುಕಟ್ಟೆಯು ಒಂದು ವಿಶೇಷ ಮಾರುಕಟ್ಟೆಯಾಗಿ ನಿರ್ವಹಣೆ ಮಾಡಬೇಕು ಹಾಗೂ ವಾಹನಗಳನ್ನು ಮಾರ್ಗದಲ್ಲಿ ನಿಲ್ಲಿಸದೇ ಪಾರ್ಕಿಂಗ್‌ಗೆ ಮೀಸಲಿಟ್ಟ ಜಾಗದಲ್ಲಿ ಪಾರ್ಕ್‌ಮಾಡುವಂತೆ ಬರುವಂತಹ ಗ್ರಾಹಕರಿಗೆ ತಿಳಿಹೇಳಿ ಅಲ್ಲಿ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರ ಪರವಾಗಿ ನಗರಪಾಲಿಕೆ ಅಯುಕ್ತರಿಗೆ ತಿಳಿಸಲಾಯಿತು. ನಗರಪಾಲಿಕೆಗೆ ಸಂಬಂಧಪಟ್ಟ ಇನ್ನೂ ಉಳಿದ ಮಾರುಕಟ್ಟೆಗಳಲ್ಲಿಯೂ ಕೂಡಲೇ ವ್ಯಾಪಾರವನ್ನು ಪ್ರಾರಂಭ ಮಾಡುವಂತೆಯೂ ಮತ್ತು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ನಗರಪಾಲಿಕೆ ಅಧಿಕಾರಿಗಳಿಗೆ ಐವನ್ ಡಿಸೋಜಾ ಸೂಚಿಸಿದರು. ಕದ್ರಿ ಪಾರ್ಕಿನ ಸಮೀಪ ಸ್ಮಾರ್ಟ್‌ಸಿಟಿಯಿಂದ ನಿರ್ಮಿಸಲಾದ ಅಂಗಡಿಗಳು ಇನ್ನೂ ಕಾರ್ಯನಿರ್ವಹಣೆ ಮಾಡದೇ ಅದು ನಿರುಪಯುಕ್ತವಾಗಿರುವ ಬಗ್ಗೆ ಕೂಡ ನಗರಪಾಲಿಕೆ ಆಯುಕ್ತರ ಗಮನಕ್ಕೆ ತರಲಾಯಿತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಐವನ್ ಡಿಸೋಜಾ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ಅಲ್ಸ್ಟೀನ್ ಡಿಕುನ್ಹಾ, ಅರುಣ್ ಕ್ರಾಸ್ತಾ, ಯೋಗಿಶ್ ನಾಯಕ್, ಇಮ್ರಾನ್ ಖಾನ್ ಉಪಸ್ಥಿತರಿದ್ದರು.
ಮಂಗಳೂರಿನಲ್ಲಿ ಅನೇಕ ಮಾರುಕಟ್ಟೆಗಳು ರಚನೆಗೊಂಡಿದ್ದರೂ ವ್ಯಾಪರಸ್ಥರು ಮಾರುಕಟ್ಟೆಯ ಒಳಗಡೆ ವ್ಯಾಪಾರ ಸಿದ್ದರಿಲ್ಲದೇ ಅನೇಕ ಮಾರುಕಟ್ಟೆಗಳು ನಿರುಪಯುಕ್ತವಾಗಿದ್ದು, ಮಂಗಳೂರಿನಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಬಗ್ಗೆ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್‌ಗುಂಡೂರಾವ್‌ರವರು ನಗರ ಪಾಲಿಕೆ ಆಯುಕ್ತರಿಗೆ ಈ ಬಗ್ಗೆ ಕೂಡಲೇ ವಾಪಾರಸ್ಥರು ಮಾರುಕಟ್ಟೆ ಒಳಗಡೆ ವ್ಯಾಪಾರ ನಡೆಸಲು ಸೂಚಿಸಬೇಕೆಂದು ವಿಧಾನ ಪರಿಷತ್ ಶಾಸಕರಾದ ಐವನ್‌ಡಿಸೋಜಾರವರ ಸಲಹೆ ಮೇರೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.