ಜ.10ರಂದು ಮಂಗಳೂರಿನಲ್ಲಿ ಸಂಚಾರ ವ್ಯತ್ಯಯ; ಪೊಲೀಸ್ ಕಮಿಷನರ್

ಮಂಗಳೂರು: ನಗರದಲ್ಲಿ ಜ.10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತಿತರರು ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ, ಪಿಲಿಕುಲ ಮತ್ತು ನರಿಂಗಾನ ಹಾಗೂ ಅಂಬ್ಲಮೊಗರುವಿನಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇವರು ಸಂಚರಿಸುವ ರಸ್ತೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಬಹುದು. ಹಾಗಾಗಿ ಸುಗಮ ಸಂಚಾರದ ದೃಷ್ಟಿಯಿಂದ ತುರ್ತು ಸಂದರ್ಭ ಹೊರತುಪಡಿಸಿ ಈ ಮಾರ್ಗಗಳಲ್ಲಿ ಸಂಚರಿಸದೆ ಬದಲಿ ಮಾರ್ಗ ಉಪಯೋಗಿಸು ವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.
*ಸಂಚಾರ ದಟ್ಟಣೆಯಾಗುವ ಮಾರ್ಗಗಳು: ಕೆಂಜಾರು ಜಂಕ್ಷನ್, ಮರವೂರು, ಕಾವೂರು, ಬೋಂದೆಲ್, ಪದವಿನಂಗಡಿ, ಮೇರಿಹಿಲ್, ಯೆಯ್ಯಾಡಿ, ಕೆ.ಪಿ.ಟಿ.ವೃತ್ತ, ಬಟ್ಟಗುಡ್ಡೆ, ಕದ್ರಿ ಕಂಬಳ, ಭಾರತ್ ಬೀಡಿ ಜಂಕ್ಷನ್, ಬಂಟ್ಸ್ ಹಾಸ್ಟೆಲ್, ಪಿ.ವಿ.ಎಸ್, ನವಭಾರತ್ ವೃತ್ತ, ಡಾ. ಅಂಬೇಡ್ಕರ್ ವೃತ್ತ, ಹಂಪನಕಟ್ಟೆ, ಕೈರಳಿ ಜಂಕ್ಷನ್, ಅತ್ತಾವರ ಕಟ್ಟೆ, ಅವತಾರ್ ಹೋಟೆಲ್ ಎದುರಿನ ರಸ್ತೆ.
*ಪದವು ಜಂಕ್ಷನ್, ನಂತೂರು ವೃತ್ತ, ಪಂಪ್‌ವೆಲ್, ಎಕ್ಕೂರು, ಜಪ್ಪಿನಮೊಗರು, ಕಲ್ಲಾಪು, ತೊಕ್ಕೊಟ್ಟು, ಕುತ್ತಾರ್ ಪದವು, ದೇರಳಕಟ್ಟೆ, ನಾಟೆಕಲ್, ಮಂಗಳಾಂತಿ, ಕಲ್ಕಟ್ಟ, ಮಂಜನಾಡಿ, ನರಿಂಗಾನ, ಕುತ್ತಾರ್ ಕೊರಗಜ್ಜನಕಟ್ಟೆ, ಉಳಿಯ, ಅಂಬ್ಲಮೊಗರು , ಮದಕ ಜಂಕ್ಷನ್.
*ಕೆಪಿಟಿ ಜಂಕ್ಷನ್, ಕೊಟ್ಟಾರ ಚೌಕಿ, ಕೋಡಿಕಲ್ ಕ್ರಾಸ್, ಕೂಳೂರು, ಕೆಐಒಸಿಎಲ್ ಜಂಕ್ಷನ್, ತಣ್ಣೀರುಬಾವಿ, ಬ್ಲೂಪ್ಲ್ಯಾಗ್ ಬೀಚ್ ಈ ಮಾರ್ಗದ ಎರಡು ಬದಿಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುವಂತಿಲ್ಲ. ಈ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಯಾವುದೇ ವಾಹನಗಳು ಸಂಚರಿಸುವಂತಿಲ್ಲ ಎಂದು ತಿಳಿಸಿದ್ದಾರೆ.







