ಸಂಚಾರ ದಂಡ ಪ್ರಕ್ರಿಯೆ| ಸೈಬರ್ ವಂಚಕರ ಬಲೆಗೆ ಬೀಳದಂತೆ ಕಮಿಷನರ್ ಎಚ್ಚರಿಕೆ

ಮಂಗಳೂರು, ಡಿ.19: ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡವನ್ನು ಶೇ.50 ರಿಯಾಯಿತಿಯಲ್ಲಿ ಕಟ್ಟಲು ರಾಜ್ಯ ಸರಕಾರ ಅವಕಾಶ ನೀಡಿರುವುದನ್ನೇ ಸೈಬರ್ ವಂಚಕರು ದುರುಪಯೋಗ ಪಡಿಸುತ್ತಿದ್ದಾರೆ. ಹಾಗಾಗಿ ದಂಡದ ನೆಪದಲ್ಲಿ ಮೋಸದ ಬಲೆಗೆ ಬೀಳದಿರಿ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ದಂಡ ಕಟ್ಟಲು ಯಾವುದೇ ಆ್ಯಪ್‌ಗಳಿಲ್ಲ. ಎಪಿಕೆ ಮಾದರಿ ಫೈಲ್‌ಗಳನ್ನು ಯಾವತ್ತೂ ಕೂಡ ಡೌನ್ಲೋಡ್ ಮಾಡಬಾರದು. ಒಂದು ವೇಳೆ ಮಾಡಿದರೆ ನಿಮ್ಮ ಮೊಬೈಲ್ ಹ್ಯಾಕ್ ಆಗಬಹುದು ಮತ್ತು ಮೊಬೈಲ್ ಸಂಪರ್ಕದಲ್ಲಿರುವ ಬ್ಯಾಂಕ್ ಖಾತೆಗಳ ವಿವರಗಳು ಸೈಬರ್ ವಂಚಕರಿಗೆ ಸಿಗಬಹುದು. ಸಾರಿಗೆ ಇಲಾಖೆಯ ವೆಬ್‌ಸೈಟ್ ಅಥವಾ ಕರ್ನಾಟಕ ವನ್ ಸೆಂಟರ್ ಮೂಲಕ ದಂಡವನ್ನು ಪಾವತಿಸಿ. ಈಗಾಗಲೆ ಮೆಸೇಜ್ ಮೂಲಕ ಎಪಿಕೆ ಫೈಲ್ಸ್ ಲಿಂಕ್‌ನ್ನು ಮಂಗಳೂರಿನ ಇಬ್ಬರು ಡೌನ್ಲೋನ್ ಮಾಡಿ ತೊಂದರೆ ಸಿಲುಕಿದ್ದಾರೆ. ಹಾಗಾಗಿ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಕಮಿಷನರ್ ಸಾರ್ವಜನಿಕರಿಗೆ ಎಂದು ಕಮಿಷನರ್ ಸೂಚಿಸಿದ್ದಾರೆ.





