ವಿಟ್ಲ| ಭಾರೀ ಗಾಳಿ ಮಳೆಗೆ ಆಟೋ ಮೇಲೆ ಬಿದ್ದ ಮರ; ಚಾಲಕನಿಗೆ ಗಾಯ

ವಿಟ್ಲ: ಕರಾವಳಿಯಾದ್ಯಂತ ಕೆಲ ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಇಂದು ಗಾಳಿ-ಮಳೆಗೆ ಅನಂತಾಡಿ ಸಮೀಪದ ಗೋಳಿಕಟ್ಟೆ ಎಂಬಲ್ಲಿ ಚಲಿಸುತ್ತಿದ್ದ ಆಟೋದ ಮೇಲೆ ಮರ ಬಿದ್ದು ಆಟೋ ಜಖಂಗೊಂಡ ಘಟನೆ ನಡೆದಿದೆ.
ಆಟೋ ಚಾಲಕ ಪ್ರಕಾಶ್ ಎಂಬವರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
Next Story