ಟ್ವೆಕಾಂಡೋ : ದಕ್ಷಿಣ ಕನ್ನಡ ಜಿಲ್ಲೆಗೆ ಎರಡು ಕಂಚು

ಮಂಗಳೂರು : ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನವೆಂಬರ್ 4 ರಿಂದ 6 ರವರೆಗೆ ನಡೆದ ರಾಜ್ಯ ಮಟ್ಟದ 4ನೇ ಕರ್ನಾಟಕ ಮಿನಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಟ್ವೆಕಾಂಡೋ ಕ್ರೀಡಾಪಟುಗಳು ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
54 ಕೆಜಿ ಒಳಗಿನ ವಿಭಾಗದಲ್ಲಿ ಕುಳಾಯಿಯ ಸಿರಾಜ್ ಮತ್ತು ನಸೀಮಾ ದಂಪತಿಯ ಪುತ್ರ ಮುಹಮ್ಮದ್ ಶಿಮಾಕ್ ಅಲಿ ಹಾಗೂ 43 ಕೆ.ಜಿ.ಯೊಳಗಿನ ವಿಭಾಗದಲ್ಲಿ ಅಬ್ದುಸ್ಸಲಾಂ ಹಾಗೂ ಅನೀಸಾ ಬಿ ಕೆ ಅವರ ಪುತ್ರಿ ರಿಫಾ ಫಾತಿಮಾ ಅವರು ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಈ ಇಬ್ಬರು ಕ್ರೀಡಾಪಟುಗಳು ಸುರತ್ಕಲ್ ಎಕ್ಸ್ ಟ್ರೀಮ್ ಫಿಟ್ ಆಂಡ್ ಫೈಟ್ ಕ್ಲಬ್ ಇಲ್ಲಿ ದಕ್ಷಿಣ ಕನ್ನಡ ಟ್ವೆಕಾಂಡೋ (ರಿ) ಇದರ ಪ್ರಧಾನ ಕಾರ್ಯದರ್ಶಿ ಕೋಚ್ ಇಸಾಕ್ ಇಸ್ಮಾಯಿಲ್ ನಂದಾವರ ಅವರಿಂದ ತರಬೇತಿ ಪಡೆದಿದ್ದಾರೆ.
Next Story





