ಮಾದಕ ವಸ್ತು ಸೇವನೆ ಆರೋಪ: ಇಬ್ಬರ ಬಂಧನ

ಮಂಗಳೂರು, ಆ.6: ನಗರದ ವೆಲೆನ್ಸಿಯಾ ಬಸ್ ನಿಲ್ದಾಣದ ಬಳಿ ಮಂಗಳವಾರ ಮಾದಕ ಸೇವನೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನಗರದ ಬಂದರು ನಿವಾಸಿ ಅಮೀರ್ ಸುಹೈಲ್ (29) ಹಾಗೂ ಜೆಪ್ಪು ಮಜಿಲ ನಾಗಬನ ರಸ್ತೆ ನಿವಾಸಿ ಜುವಾ (24) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





