ಮಾದಕ ವಸ್ತುಗಳ ಮಾರಾಟ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಮಂಗಳೂರು, ಆ.13: ನಗರದ ಚಿಲಿಂಬಿಗುಡ್ಡೆ ಸಮೀಪ ಮಾದಕ ವಸ್ತುಗಳ ಮಾರಾಟ ಆರೋಪದಲ್ಲಿ ನಗರದ ಅಪರಾಧ ಪತ್ತೆದಳದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿರುವುದು ವರದಿಯಾಗಿದೆ.
ರಿಯಾಝ್ ಅಹಮ್ಮದ್ ಮತ್ತು ಫಹಾದ್ ಬಂಧಿತ ಆರೋಪಿಗಳು.
ಸಿಸಿಬಿ ಪೊಲೀಸರು ಆ.11ರಂದು ಚಿಲಿಂಬಿ ಗುಡ್ಡೆ ಸಮೀಪ ತೆರಳುತ್ತಿದ್ದಾಗ ಬೈಕ್‌ನಲ್ಲಿ ರಿಯಾಝ್ ಮತ್ತು ಫಹಾದ್ ಕುಳಿತಿದ್ದರು. ಅನುಮಾನದ ಮೇಲೆ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ನಿಷೇಧಿತ ಮಾದಕ ಮಾರಾಟಕ್ಕೆ ಬಂದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದರು.
ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ: ರಿಯಾಝ್ ಅಹಮ್ಮದ್ ಬೈಕ್‌ನ ಟ್ಯಾಂಕ್ ಕವರ್‌ನಲ್ಲಿಟ್ಟಿದ್ದ 12.63 ಗ್ರಾಂ ತೂಕದ 2.60ಲಕ್ಷ ರೂ. ಮೌಲ್ಯದ ಎಂಡಿಎಂಎ ಮತ್ತು ಅರೋಪಿ ಫಹಾದ್‌ನ ಬ್ಯಾಗ್‌ನಲ್ಲಿಟ್ಟಿದ್ದ 11.65ಗ್ರಾಂ ತೂಕದ ಅಂದಾಜು 2.40ಲಕ್ಷ ರೂ. ಮೌಲ್ಯದ ಎಂಡಿಎಂಎನ್ನು ವಶಪಡಿಸಿಕೊಳ್ಳಲಾಗಿದೆ. ಈ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಗಳು 2, ಡಿಜಿಟಲ್ ತೂಕ ಮಾಪಕ 1, ಸಣ್ಣ ಸಣ್ಣ ಜಿಪ್ ಲಾಕ್ ಇರುವ ಖಾಲಿ ಪ್ಲಾಸ್ಟಿಕ್ ಕವರ್ ಗಳು 30, ನಗದು 1150ರೂ., ಕತ್ಯಕ್ಕೆ ಬಳಸಿದ ಬೈಕ್ 1 ಮತ್ತು ಬ್ಯಾಗ್ 1ನ್ನು ವಶಪಡಿಸಿಕೊಳ್ಳಲಾಗಿದೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







