ಉಚ್ಚಿಲ: ಜ.19 ರಂದು ಇಸ್ಲಾಹೀ ಪ್ರವಚನ

ದಿನಾಂಕ 19.01.2025ರಂದು ಆದಿತ್ಯವಾರ ಸಂಜೆ 4.30 ರಿಂದ ರಾತ್ರಿ 10 ರವರೆಗೆ ಸೋಮೇಶ್ವರ ಉಚ್ಚಿಲ ಜಂಕ್ಷನ್ ನಲ್ಲಿ ಕರ್ನಾಟಕ ಸಲಫಿ ಅಸೋಸಿಯೇಷನ್ ಉಚ್ಚಿಲ ಅಜ್ಜಿನಡ್ಕ ಘಟಕದ ವತಿಯಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಖ್ಯಾತ ವಿದ್ವಾಂಸರಾದ ಮೂಸ ಸ್ವಲಾಹಿ ಕಾರ ಮತ್ತು ಮುನೀರ್ ಶರಫಿ ಯವರು ಉಪನ್ಯಾಸ ನೀಡಲಿರುವರು.
ಸಂಜೆ 4.30 ರಿಂದ 5.30 ರ ವರೆಗೆ ಮದ್ರಸತುಲ್ ಇಸ್ಲಾಹಿಯ್ಯ ಅಜ್ಜಿನಡ್ಕ ಇದರ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಮತ್ತು ಬಹುಮಾನ ವಿತರಣೆ ನಡೆಯಲಿದೆ ಎಂದು ಕೆಎಸ್ಎ ಪ್ರಕಟಣೆಯಲ್ಲಿ ತಿಳಿಸಿದೆ.
Next Story