ಉಚ್ಚಿಲದ ಅಫೀಫ ಫ್ರೆಂಡ್ಸ್ ವೆಲ್ಫೇರ್ ಟ್ರಸ್ಟ್‌ನ ಸಂಭ್ರಮ

ಉಳ್ಳಾಲ: ಅಫೀಫ ಫ್ರೆಂಡ್ಸ್ ವೆಲ್ಫೇರ್ ಟ್ರಸ್ಟ್(ರಿ)ಉಚ್ಚಿಲ ಇದರ 30ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉಚ್ಚಿಲ ಕಿಯಾಂಝ ಗಾರ್ಡನ್ ನಡೆಯಿತು. ಉಚ್ಚಿಲ 407 ಜುಮಾ ಮಸೀದಿಯ ಮುದರ್ರಿಸ್ ಇಬ್ರಾಹಿಂ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಊರಿನ ಹಿರಿಯರಾದ ಎಂ.ಎಚ್. ಪೋಕರ್ ಕುಂಞಿ ಹಾಗೂ ಧಾರ್ಮಿಕ ಸ್ಥಾಪನೆಗಳ ಅಭಿವೃದ್ಧಿಯಲ್ಲಿ ಸಕ್ರಿಯರಾದ ಕುಂಞ ಅಹ್ಮದ್ ಹಾಜಿ, ಕನ್ನಡ ರಾಜ್ಯೋತ್ಸವ ಸಂದರ್ಭದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಅಲಿ ಜಿ.ಎಂ.ಎಚ್ ಉಚ್ಚಿಲ ಅವರನ್ನು ಸನ್ಮಾನಿಸಲಾಯಿತು.
ಅಫೀಫ ಫ್ರೆಂಡ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭ ಕಾಲ್ಚೆಂಡು ತಂಡದ ಸಮವಸ್ತ್ರವನ್ನು ಪ್ರಧಾನ ಕಾರ್ಯದರ್ಶಿ ಅಹ್ಮದ್ ಝಿಶಾನ್, ಕೋಶಾಧಿಕಾರಿ ಸಿರಾಜ್ ಕೆ ಉಚ್ಚಿಲ ಬಿಡುಗಡೆಗೊಳಿಸಿದರು.
ಹೋಪ್ ಫೌಂಡೇಶನ್ ಸ್ಥಾಪಕ ಸೈಫ್ ಸುಲ್ತಾನ್ ʼಪೋಷಣೆ ಮತ್ತು ಪೋಷಕತ್ವ ಇಂದಿನ ಜವಾಬ್ದಾರಿಗಳುʼ ಹಾಗೂ ಸವಾದ್ ಅಲಿ ʼಮಂಗಳೂರು ಯುವಜನತೆ ಆರೋಗ್ಯಕರ ಜೀವನಶೈಲಿ ಮತ್ತು ಸಾಮಾಜಿಕ ಜಾಗೃತಿʼ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು.
ಕ್ರೀಡಯಿಂದ ಸೇವೆಗೆ-ಮೂರು ದಶಕಗಳ ಪಯಣ ಅಫೀಫಾ ಸ್ಮರಣ ಸಂಚಿಕೆಯನ್ನು ಆಫೀಫ ಸಂಘಟನೆ ಸ್ಥಾಪಕ ಮುಹಮ್ಮದ್ ಶಮೀರ್ ಬಿಡುಗಡೆಗೊಳಿಸಿದರು.
ಉಚ್ಚಿಲಗುಡ್ಡೆ ರಹ್ಮಾನಿಯಾ ಇಮಾಮ್ ಆಕ್ಬರ್ ಆಲಿ ಸಅದಿ, ಉಚ್ಚಿಲ 407 ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಪ್ಪಳ, ಪೆರಿಬೈಲ್ ಮಸ್ಜಿದುಲ್ ಹುದಾ ಅಧ್ಯಕ್ಷ ಅಬ್ಬಾಸ್ ಹಾಜಿ, ಅಜ್ಜಿನಡ್ಕ ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಸುಲೈಮಾನ್ ಹಾಜಿ, ಬೈತುಲ್ಲಾ ಮಸೀದಿಯ ಅಧ್ಯಕ್ಷ ಮೊಹಿದ್ದೀನ್ ಕುಂಞಿ, ಯು.ಆರ್. ಅಕಾಡಮಿಯ ಪ್ರಚಾರಕ ಉಮೇಶ್ ಉಚ್ಚಿಲ್, ಫಲಾಹ್ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಯು.ಬಿ. ಮುಹಮ್ಮದ್ ಹಾಜಿ, ಲೈಫ್‌ಲೈನ್ ಫೌಂಡೇಶನ್ ಅಧ್ಯಕ್ಷ ಅಬ್ಬಾಸ್ ಹಾಜಿ ಪೋಕರ್, ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ರಾಜ್ಯಾಧ್ಯಕ್ಷ ಝಕೀರ್ ಹುಸೈನ್ ಉಚ್ಚಿಲ್, ಅಜ್ಜಿನಡ್ಕ ಬದ್ರಿಯಾ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ, ಸೋಮೇಶ್ವರ ಪುರಸಭೆ ಸದಸ್ಯ ಅಬ್ದುಲ್ ಸಲಾಂ ಯು, ಮ್ಯಾಕ್ ಬ್ರದರ್ಸ್ ಅಧ್ಯಕ್ಷ ಹಾರಿಸ್ ಯು.ಎ, ನೂರುಲ್ ಇಸ್ಲಾಮ್ ಅಧ್ಯಕ್ಷ ಇಬ್ರಾಹಿಂ ಹಿಮಮಿ, ಬಿಎಸ್‌ಬಿ ಅಧ್ಯಕ್ಷ ಅನಸ್ ಉಚ್ಚಿಲ, ಬಿಬಿಜಿ ಅಧ್ಯಕ್ಷ ಝುಲ್ಫಾಝ್ ಉಚ್ಚಿಲ ಉಪಸ್ಥಿತರಿದ್ದರು.
ಜೊತೆ ಕಾರ್ಯದರ್ಶಿ ಝೈನುದ್ದೀನ್ ನವಾಝ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿ ಉಮರ್ ಮುಹಮ್ಮದ್ ಫಾಹಿಂ ಪ್ರಾರ್ಥನೆಗೈದರು. ಸದಸ್ಯ ಶಬೀರ್ ಇಸ್ಮಾಯಿಲ್ ಸ್ವಾಗತಿಸಿದರು. ಮಾಧ್ಯಮ ಸಂಚಾಲಕ ಇಬ್ರಾಹಿಂ ಖಲೀಲ್ ಅರೀಫ್ ವಂದಿಸಿದರು. ಅಫೀಫ ಫ್ರೆಂಡ್ಸ್ ವೆಲ್ಫೇರ್ ಟ್ರಸ್ಟ್ ಸದಸ್ಯ ನಾಸೀರ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು.







