ಉಳ್ಳಾಲ: ಬೃಹತ್ ರಕ್ತದಾನ , ಆರೋಗ್ಯ ತಪಾಸಣಾ ಶಿಬಿರ

ಉಳ್ಳಾಲ:ಅಮೀನುದ್ದೀನ್ ಚಾರಿಟೇಬಲ್ ಟ್ರಸ್ಟ್ ಉಳ್ಳಾಲ ಇದರ ವತಿಯಿಂದ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಇದರ ಸಹಯೋಗದೊಂದಿಗೆ ಕೂರತ್ ತಂಙಳ್ ಹಾಗೂ ಮರ್ಹೂಮ್ ಅಬ್ಬಾಸ್ ಹಾಜಿ ಕೋಟೆಪುರ ರವರ ಅನುಸ್ಮರಣೆ ಪ್ರಯುಕ್ತ ಬೃಹತ್ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರ ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಿತು.
ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಜುಮ್ಮಾ ಮಸೀದಿ ಖತೀಬ್ ಹಾಫಿಲ್ ಮಜೀದ್ ಸಖಾಫಿ ದುಆ ನೆರವೇರಿಸಿದರು.
ಈ ಕಾರ್ಯಕ್ರಮ ದಲ್ಲಿ ಸಯ್ಯಿದ್ ಅಕ್ತರ್ ಹುಸೈನ್ ಚಿಸ್ತಿ ಬಿಜಾಪುರ,ಸಯ್ಯದ್ ಝಿಯಾದ್ ತಂಙಳ್ ಬದವಿ ಅಲೇಕಳ ಸಯ್ಯದ್ ಖುಬೈಬ್ ತಂಙಳ್, ಪಟ್ಲ ಜುಮಾ ಮಸೀದಿ ಖತೀಬ್ ಎಮ್ ಸಿ ಮುಹಮ್ಮದ್ ಫೈಝಿ ಮೋಂಜಮ್, ಕೇಂದ್ರ ಜುಮ್ಮಾ ಮಸೀದಿ ಖತೀಬ್ ಹಾಫಿಲ್ ಮಜೀದ್ ಸಖಾಫಿ , ಬೃಹತ್ ರಕ್ತದಾನ , ಆರೋಗ್ಯ ತಪಾಸಣಾ ಶಿಬಿರ
ಶರೀಯತ್ ಕಾಲೇಜು ಪ್ರೊಫೆಸರ್ ನಜೀಬ್ ನೂರಾನಿ , ನೌಮಾನ್ ನೂರಾನಿ , ಇಬ್ರಾಹಿಂ ಅಹ್ಸನಿ ,ಬಶೀರ್ ಸಖಾಫಿ , ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಕೋಶಾಧಿಕಾರಿ ನಾಝಿಂ ಮುಕ್ಕಚ್ಚೇರಿ ,ಇಸ್ಮಾಯಿಲ್ ಹಳೇಕೋಟೆ, ಫಾರೂಕ್ ಅಬ್ಬಾಸ್ ಕೋಟೆಪುರ, ಅಮೀನುದ್ದೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಯು ಎ ಹುಸೈನ್ , ಕೆಎಂಜೆ ಅಕ್ಕರೆ ಕೆರೆ ಪ್ರಧಾನ ಕಾರ್ಯದರ್ಶಿ ಹಮೀದ್ ಪಟೇಲ್‌ಬಾಗ್ , ಟ್ರಸ್ಟ್ ನ ಕೋಶಾಧಿಕಾರಿ ಇಮ್ರಾನ್ ಅಕ್ಕರೆ ಕೆರೆ,ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಹಳೆ ಕೋಟೆ, ರಹ್ಮತುಲ್ಲಾ, ಮುಸ್ತಫಾ ಮಾರ್ಗತಲೆ, ನಝೀರ್ ಮೇಲಂಗಡಿ, ಅಶ್ರಫ್ ಮೇಲಂಗಡಿ ಮತ್ತಿತರರು ಉಪಸ್ಥಿತರಿದ್ದರು.







