ಉಳ್ಳಾಲ ಹೋಬಳಿ ಮಟ್ಟದ ಕ್ರೀಡಾಕೂಟ -2025

ಮಂಗಳೂರು: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ, ಇಸ್ಲಾಹಿ ಆಂಗ್ಲ ಮಾಧ್ಯಮಶಾಲೆ ಉಳ್ಳಾಲ ವತಿಯಿಂದ ಉಳ್ಳಾಲ ಹೋಬಳಿ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ 14 ಮತ್ತು 17 ವಯೋಮಾನದ ಬಾಲಕ ಬಾಲಕಿಯರ ಕ್ರೀಡಾಕೂಟ -2025 ಮಂಗಳಾ ಕ್ರೀಡಾಂಗಣದಲ್ಲಿ ಬುಧವಾರ ನಡೆಯಿತು.
ಇಸ್ಲಾಹಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಿ. ಅಬ್ದುಲ್ ರಝಾಕ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ ಜ್ಞಾನೇಶ್ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಲಿಲ್ಲಿ ಪಾಯಸ್ ಪ್ರಾಸ್ತವಿಕವಾಗಿ ಮಾತನಾಡಿದರು.
ಮಂಗಳೂರು ದೈಹಿಕ ಶಿಕ್ಷಣ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಭುವನೇಶ್, ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಅಹ್ಮದ್ ಮಾಸ್ಟರ್, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯದರ್ಶಿ ತ್ಯಾಗಂ ಹರೇಕಳ, ಉಳ್ಳಾಲ ವಲಯ ಸಮೂಹ ಸಂಪನ್ಮೂಲ ವ್ಯಕ್ತಿ ಮೋಹನ್, ಕೊಣಾಜೆ ವಲಯ ಮತ್ತು ಪಿಲಾರ್ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ರೆಹನಾ ಬಾನು ಮತ್ತು ಗೀತಾ ಶೆಟ್ಟಿ, ಉಳ್ಳಾಲ ವಲಯ ಪ್ರೌಢ ಶಾಲಾ ವಿಭಾಗದ ನೋಡೆಲ್ ಅಧಿಕಾರಿ ರಾಜೀವ್ ನಾಯಕ್, ಪ್ರಾಥಮಿಕ ಶಾಲಾ ವಿಭಾಗದ ನೋಡೆಲ್ ಅಧಿಕಾರಿ ರಾಧಾ ಕೃಷ್ಣ ರೈ, ಪುರುಷೋತ್ತಮ್, ಇಸ್ಲಾಹಿ ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳಾದ ಯು.ಎನ್ ಅಬ್ದುಲ್ ರಝಾಕ್, ಅಬ್ದುಲ್ ಲತೀಫ್, ಹುರೈರ್ ಅಬ್ದುಲ್ ರಹ್ಮಾನ್, ಇಬ್ರಾಹಿಮ್ ಸೌಶಾದ್ , ಆಡಳಿತಾಧಿಕಾರಿ ಆಯಿಶಾ ಸಬೀನಾ ಕೈಸಿರನ್, ಪ್ರಾಂಶುಪಾಲ ಸುಮಂಗಳ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ, ವ್ಯವಸ್ಥಾಪಕಿ ಅನಿಲ ಎ.ಶೆಟ್ಟಿ, ಭೌತಶಾಸ್ತ್ರ ಅಧ್ಯಾಪಕ ಕಾಂತರಾಜ್, ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು, ಮಂಗಳೂರು ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಪ್ರಧಾನಕಾರ್ಯದರ್ಶಿ ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು, ಅಧ್ಯಾಪಕ ಮುನೀಶ್ ಸ್ವಾಗತಿಸಿದರು, ಉಪನ್ಯಾಸಕಿ ವಾಣಿಶ್ರೀ ವಂದಿಸಿದರು.







