ಉಳ್ಳಾಲ: ವಿಪರೀತ ಮಳೆಗೆ ಮನೆ ಕುಸಿತ

ಉಳ್ಳಾಲ : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮುನ್ನೂರು ಗ್ರಾಮದ ಸುಭಾಷ್ ನಗರದಲ್ಲಿ ಮನೆಯೊಂದು ಭಾಗಶಃ ಹಾನಿಯಾಗಿದೆ.
ಉಳ್ಳಾಲ ಬೈಲ್ ನಲ್ಲಿ ಅಮೀರ್ ಅಲಿ ಎಂಬವರ ಮನೆ ಕುಸಿದು ಬಿದ್ದಿದೆ. ಪಜೀರು ಗ್ರಾಮ ದ ಅಕಾ೯ಣ ವೆಂಬಲ್ಲಿ ದೊಡ್ಡ ಗಾತ್ರದ ಗುಡ್ಡೆ ಕುಸಿತ ವಾಗಿದೆ.
ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ಪ್ರಮೋದ್, ತಹಶೀಲ್ದಾರ್ ಪ್ರಶಾಂತ್, ನಗರಸಭೆ ಪೌರಾಯುಕ್ತ ನವೀನ್ ಹೆಗ್ಡೆ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story





