ಉಳ್ಳಾಲ: ಓಂ ಶ್ರೀ ಪ್ರಶಸ್ತಿ ಪ್ರದಾನ,ಸನ್ಮಾನ ಕಾರ್ಯಕ್ರಮ

ಉಳ್ಳಾಲ: ಉಳ್ಳಾಲ ವಿಧಾನಸಭಾ ಕ್ಷೇತ್ರದ ಎನ್ ಎಸ್ ಯು ಐ ವತಿಯಿಂದ ಎನ್.ಎಸ್.ಯು.ಐ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಓಂ ಶ್ರೀ ರವರ ಸ್ಮರಣಾರ್ಥ “ಒಂ ಶ್ರೀ ಪ್ರಶಸ್ತಿ ಸನ್ಮಾನ ಕಾರ್ಯಕ್ರಮ ಕಲ್ಲಾಪು ಯುನಿಟಿ ಹಾಲ್‌ನಲ್ಲಿ ನಡೆಯಿತು .
ಎಸ್ ಯು ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಅಲೈಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಯುಟಿ ಇಫ್ತಿಕರ್ ಎನ್ ಎಸ್ ಯುಐ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಅದಕ್ಕೆ ಪರಿಹಾರ ಒದಗಿಸುವ ಕೆಲಸ ಆಗಬೇಕು. ಇದಕ್ಕಾಗಿ ನಾವು ಸದಾ ಪ್ರಯತ್ನ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಉಳ್ಳಾಲ ತಾಲೂಕಿನಲ್ಲಿ 10ನೇ ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಸಾಧಕರಿಗೆ ಪ್ರಶಸ್ತಿಗಳೊಂದಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು .
ಗ್ಯಾರಂಟಿ ಯೋಜನೆಯ ಯುವನಿಧಿ ಗೆ ನೋಂದಣಿ ಪ್ರಕ್ರಿಯೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಜಾಕೀರ್ ಹುಸೈನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಾತನಾಡಿದರು.
ಈ ಕಾರ್ಯಕ್ರಮ ದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಸುರೇಶ್ ಭಟ್ನಗರ, ಸಫ್ವಾನ್ ಕುದ್ರೋಳಿ, ಸತೀಶ್ ಪೂಜಾರಿ, ಪ್ರತಿಭಾ ಪೂಜಾರಿ, ಯುಟಿ ಫರೀದ್, ಅಚ್ಯುತ ಗಟ್ಟಿ, ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ, ಸಾಹಿಲ್ ಮಂಚಿಲ , ನವನೀತ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು
ಮಾಜಿ ತಾ.ಪಂ. ಸದಸ್ಯ ಮುಸ್ತಫಾ ಮಲಾರ್ ಕಾರ್ಯಕ್ರಮ ನಿರೂಪಿಸಿದರು







