Mangaluru | ಎಂಡಿಎಂಎ ಮಾರಾಟ ಆರೋಪ: ಮೂವರನ್ನು ಬಂಧಿಸಿದ ಉಳ್ಳಾಲ ಪೊಲೀಸರು

ಉಳ್ಳಾಲ: ಇಲ್ಲಿನ ಠಾಣಾ ವ್ಯಾಪ್ತಿಯ ತಲಪಾಡಿ ಗ್ರಾಮದ ತಚ್ಚಣಿ ಎಂಬಲ್ಲಿ ನಿಷೇದಿತ ಮಾಧಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಬ್ದುಲ್ ರವೂಫ್ (30), ಶರೀಫ್ ಯಾನೆ ಅಮಿನ್ (34), ನಿಯಾಝ್ ( 23) ಬಂಧಿತರು.
ಬಂಧಿತರಿಂದ 42 ಗ್ರಾಂ ತೂಕದ ಎಂಡಿಎಂಎ, ಟೊಯೋಟಾ ಕಾರು, ಮೂರು ಮೊಬೈಲ್, 2500 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಪೈಕಿ ನಿಯಾಝ್ ಎಂಡಿಎಂಎ ಖರೀದಿ ಮಾಡಲು ಬಂದಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ದಾಳಿ ಸಂದರ್ಭದಲ್ಲಿ ಆರೋಪಿ ಸಲಾಮ್ ಎಂಬಾತ ಪರಾರಿ ಆಗಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





