ಉಳ್ಳಾಲ | ಬದ್ರಿಯಾ ಜುಮಾ ಮಸೀದಿ ವತಿಯಿಂದ 77ನೇ ಗಣರಾಜೋತ್ಸವ

ಉಳ್ಳಾಲ : ಬದ್ರಿಯಾ ಜುಮಾ ಮಸೀದಿ ಮತ್ತು ಹಯಾತುಲ್ ಇಸ್ಲಾಮ್ ಮದರಸ ವತಿಯಿಂದ 77ನೇ ಗಣರಾಜೋತ್ಸವನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ಮಸೀದಿ ಅಧ್ಯಕ್ಷ ಸುಲ್ಯೆಮಾನ್ ಹಾಜಿ ನೆರವೇರಿಸಿದರು. ದಿನದ ಮಹತ್ವದ ಬಗ್ಗೆ ಮಸೀದಿ ಖತೀಬ್ ಝುಬೈರ್ ಫೈಝಿ, ಮಸೀದಿ ಕಾರ್ಯದರ್ಶಿ ಅಹ್ಮದ್ ಅಜ್ಜಿನಡ್ಕ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮಸೀದಿ ಉಪಾಧ್ಯಕ್ಷ ಬಶೀರ್ ಮುಹಮ್ಮದ್, ಖಾಸಿಂ ಹಿತ್ತಿಲು, ಮಾಜಿ ಅಧ್ಯಕ್ಷರಾದ ಕುಂಞ ಅಹಮ್ಮದ್ ಹಾಜಿ, ಕಮಿಟಿ ಸದಸ್ಯರಾದ ಅಬ್ದಲ್ ರಝಾಕ್, ಅಬ್ದುಲ್ಲಾ, ಇಬ್ರಾಹೀಂ ಕೋಟೆಕಾರ್ ಗ್ಲೋಬಲ್ ಚಾರಿಟೇಬಲ್ ಟ್ರಸ್ಟಿನ ಸಂಚಾಲಕರಾದ ಇಸ್ಮಾಯಿಲ್ ಸಿ.ಎಚ್. ಮತ್ತಿತರರು ಉಪಸ್ಥಿತರಿದ್ದರು.
Next Story





