ಉಳ್ಳಾಲ | ಅಲ್ ಮೆಮ್ಸ್ ಜುಬಿಲೋಸೊ-25 : ಸ್ವಾಗತ ಸಮಿತಿ ರಚನೆ

ಉಳ್ಳಾಲ, ನ.23: ಅಲ್ ಮದೀನ ಆಂಗ್ಲ ಮಾಧ್ಯಮ ಶಾಲೆ ನರಿಂಗಾನ ಇದರ ವಾರ್ಷಿಕ ಕಲೋತ್ಸವ ಜುಬಿಲೋಸೊ ಡಿ. 4,5,6 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಇದರ ಪೂರ್ವಭಾವಿ ಸಿದ್ಧತೆ ಮತ್ತು ಆಯೋಜನೆಗಾಗಿ ಸ್ವಾಗತ ಸಮಿತಿ ರಚನಾ ಸಭೆಯು ಇತ್ತೀಚೆಗೆ ಅಲ್ ಮದೀನ ಶಾಲೆಯಲ್ಲಿ ನಡೆಯಿತು.
ಸಂಸ್ಥೆಯ ಡೈರೆಕ್ಟರ್ ಮುಹಮ್ಮದ್ ಕುಂಞಿ ಅಮ್ಜದಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ಮೀಡಿಯಂ ಮದ್ರಸದ ಸದರ್ ಅಬೂಬಕರ್ ಮದನಿ ಪಡಿಕ್ಕಲ್ ಸ್ವಾಗತಿಸಿದರು. ಶಾಲಾ ಪ್ರಾಂಶುಪಾಲ ಕೆ.ಪಿ ಮನ್ಸೂರ್ ಹಿಮಮಿ ಪ್ರಾಸ್ತಾವಿಕ ಭಾಷಣ ಮಾಡಿದರು. ಅಕಾಡಮಿಕ್ ಡೈರಕ್ಟರ್ ಅಬುಸಾಲಿಹ್ ಅಝ್ಹರಿ, ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಮುಹಮ್ಮದ್ ಮಾಸ್ಟರ್, ಝೈನುಲ್ ಆಬಿದ್ ಮದನಿ, ಸಿದ್ದೀಕ್ ಅಹ್ಸನಿ, ಝಕರಿಯ ಅಹ್ಸನಿ, ಇಸ್ಮಾಯಿಲ್ ಸಖಾಫಿ, ಫಾರೂಕ್ ಸಖಾಫಿ ಉಪಸ್ಥಿತರಿದ್ದರು. ಕನ್ವೀನರ್ ಅಬ್ದುಲ್ ಲತೀಫ್ ವಂದಿಸಿದರು.
ಜುಬಿಲೋಸೊ-25 ರ ಸ್ವಾಗತ ಸಮಿತಿಯ ಚೆಯರ್ಮ್ಯಾನ್ ಆಗಿ ಅಬ್ದುಲ್ ಖಾದರ್ ಮುಸ್ಲಿಯಾರ್, ವೈಸ್ ಚೆಯರ್ಮಾನ್ ಆಗಿ ಮುಸ್ತಫ ಸಅದಿ ಹಾಗೂ ಮುಹಮ್ಮದ್ ಜೀಲಾನಿ, ಜನರಲ್ ಕನ್ವೀನರ್ ಆಗಿ ಮೊಯ್ದಿನ್ ಕುಂಞಿ, ವೈಸ್ ಕನ್ವೀನರ್ ಆಗಿ ಅಬ್ದುಲ್ ಲತೀಫ್ ಹಾಗೂ ಮುಹಮ್ಮದ್ ನಾಸಿರ್, ಫೈನಾನ್ಸ್ ಕನ್ವೀನರ್ ಆಗಿ ಇಸ್ಮಾಯಿಲ್ ಫಯಾಝ್ ಹಾಗು 40 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.





