ಉಳ್ಳಾಲ : ನಗರ ಸಭೆ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಉಳ್ಳಾಲ : ಇಲ್ಲಿನ ನಗರಸಭೆ ವತಿಯಿಂದ ಉಳ್ಲಾಲದ ವಿವಿಧ ಸಂಘಟನೆಗಳ ಸಹಕಾರದಿಂದ ಉಳ್ಳಾಲ ಕಡಲ ಕಿನಾರೆ ಸ್ವಚ್ಚತಾ ಕಾರ್ಯಕ್ರಮ ರವಿವಾರ ನಡೆಯಿತು.
ಉಳ್ಳಾಲ ತಾಲೂಕು ತಹಶಿಲ್ದಾರ್ ಪುಟ್ಟರಾಜು ಹಸಿರು ನಿಶಾನೆ ತೋರಿಸುವ ಮೂಲಕ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನಮ್ಮ ಆರೋಗ್ಯವನ್ನು ನಾವೇ ಕಾಪಾಡಬೇಕು ಈ ನಿಟ್ಟಿನಲ್ಲಿ ಸ್ವಚ್ಚತೆ ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು ಎಂದರು.
ಉಳ್ಳಾಲ ನಗರ ಸಭೆ ಪೌರಾಯುಕ್ತ ವಾಣಿ ವಿ. ಆಳ್ವ ಮಾತನಾಡಿ ಉಳ್ಳಾಲ ನಗರ ಸಭೆಯು ಸ್ವಚ್ಚತೆಗೆ ಹೆಚ್ಚಿನ ಮಹತ್ವ ನೀಡಿದೆ, ಇಂದಿನ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಸಂಘ ಸಂಸ್ಥಗೆ ಅಭಿಂದನೆ ಸಲ್ಲಿಸಿದರು.
ಉಳ್ಳಾಲ ನಗರಸಭಾ ಆರೋಗ್ಯಾಧಿಕಾರಿ ರವಿಕೃಷ್ಣ, ನಗರ ಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ವೀಣಾ ಶಾಂತಿ ಡಿಸೋಜ, ನಿಕಟಪೂರ್ವ ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಸದಸ್ಯರಾದ ಮೊಹಮ್ಮದ್ ಮುಕ್ಕಚ್ಚೇರಿ, ಮುಸ್ತಾಕ್ ಪಟ್ಲ, ಅಬ್ದುಲ್ ಜಬ್ಬಾರ್, ಅಝೀಝ್ ಕೋಡಿ, ಖಲೀಲ್ ಇಬ್ರಾಹಿಮ್, ಬಶೀರ್ , ಲಯನ್ಸ್ ಕ್ಲಬ್ ಕಾವೇರಿ ಅಧ್ಯಕ್ಷ ಉಷಾ ಪ್ರಭಾಕರ್, ಹಳೆಕೋಟೆ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಯ ಮುಖ್ಯೋಪದ್ಯಾಯರಾದ ಕೆ.ಎಮ್.ಕೆ ಮಂಜನಾಡಿ,ಹಾಗೂ ಉಳ್ಳಾಲ ನಗರ ಸಭೆ ಮೆನೇಜರ್ ಜಯಶೀಲಾ ಹಾಗೂ ಪ್ರದೀಪ್, ನಗರ ಸಭಾ ಸಿಬ್ಬಂದಿ ಉಪಸ್ಥಿತರಿದ್ದರು.







