ಉಳ್ಳಾಲ | ʼಇನೀಝಿಯೋ 2025ʼ ವಾರ್ಷಿಕ ಕ್ರೀಡಾಕೂಟ

ಉಳ್ಳಾಲ : ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಪದವಿಪೂರ್ವ ಕಾಲೇಜು ಇದರ ಆಶ್ರಯದಲ್ಲಿ ಇನೀಝಿಯೋ 2025 ವಾರ್ಷಿಕ ಕ್ರೀಡಾಕೂಟವು ಬುಧವಾರ ನಡೆಯಿತು .
ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ ಸೈನ್ಸ್ ಅಧ್ಯಕ್ಷ ಯು.ಟಿ.ಇಫ್ತಿಕರ್ ಫರೀದ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕ್ರೀಡಾ ಮನೋಭಾವದಿಂದ ಆಟ ಆಡಬೇಕು. ಗೆಲುವು ಮತ್ತು ಸೋಲು ಒಂದೇ ನಾಣ್ಯದ ಎರಡು ಮುಖ ಇದ್ದಂತೆ, ನಿಮ್ಮ ಜೀವನದಲ್ಲಿ ಗುರಿ ಇರಬೇಕು ಎಂದು ಹಾರೈಸಿದರು.
ಇಸ್ಲಾಹಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಅಬ್ದುಲ್ ರಝಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ ಸೈನ್ಸ್ ಅಧ್ಯಕ್ಷ ಯು.ಟಿ.ಇಫ್ತಿಕರ್ ಫರೀದ್ ಅವರನ್ನು ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಇಸ್ಲಾಹಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಭಾಷಾ, ಸ್ಥಾಪಕ ಟ್ರಸ್ಟಿ ಯು.ಎನ್.ಅಬ್ದುಲ್ ರಝಾಕ್, ಕಾರ್ಯದರ್ಶಿ ಅಹಮ್ಮದ್ ಕುಂಞ ಎಂ., ಟ್ರಸ್ಟಿಗಳಾದ ಕೆ.ಅಬ್ದುಲ್ ಲತೀಫ್, ಎಂ.ಇಬ್ರಾಹಿಂ ಫಕೀರ್, ಕೆ.ಎಚ್.ಸಲೀಮ್, ಫಿರೋಝ್ ಅಬ್ದುಲ್ ರಝಾಕ್, ಇಬ್ರಾಹಿಂ ಸೌಶಾದ್, ಆಡಳಿತ ಅಧಿಕಾರಿ ಆಯಿಶಾ ಸಬೀನಾ ಕೈಸಿರನ್, ಪ್ರಾಂಶುಪಾಲರಾದ ಸುಮಂಗಲ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ, ಮ್ಯಾನೇಜರ್ ಅನಿಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ನಿತಾಶ ಅಬಿದ್ ಜಲೀಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಮೂನಿಸ್ ಸ್ವಾಗತಿಸಿದರು. ಚೈತ್ರ ವಂದಿಸಿದರು.







