ಉಳ್ಳಾಲ: ಮುಹಿಯುದ್ದೀನ್ ಜುಮಾ ಮಸೀದಿಗೆ ಸಚಿವ ರಹೀಂ ಖಾನ್ ಭೇಟಿ
ಮಂಗಳೂರು, ಸೆ.27: ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿ ಮಂಗಳವಾರ ಭೇಟಿ ನೀಡಿದ ಹಜ್ ಸಚಿವ ರಹೀಂ ಖಾನ್, ಮೌಲೂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಶಿಕ್ಷಣ ಎನ್ನುವುದು ನಿರಂತರ ಪ್ರಕ್ರಿಯೆ, ಧಾರ್ಮಿಕ ಶಿಕ್ಷಣ ಪಡೆಯುವವರು ಭಾಗ್ಯವಂತರು. ಮಸೀದಿ ದುರಸ್ತಿಗೆ ವಕ್ಫ್ ಬೋರ್ಡ್ ನಿಂದ ಮೇಲಂಗಡಿ ಮಸೀದಿಗೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.
ಮಸೀದಿಯ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಅಧ್ಯಕ್ಷತೆ ವಹಿಸಿ, ಮಸೀದಿ ಅಧೀನದಲ್ಲಿ 750ರಷ್ಟು ಮನೆಗಳು, 450 ಮಕ್ಕಳು ಮದ್ರಸಕ್ಕೆ ಬರುತ್ತಿದ್ದಾರೆ. ಮಸೀದಿಯ ಮೇಲ್ಛಾವಣಿ ಸೋರುತ್ತಿದ್ದು ಮಳೆಗಾಲದಲ್ಲಿ ನಮಾಝ್ ಗೆ ತೊಂದರೆಯಾಗುತ್ತಿದೆ, ಖಬರಸ್ತಾನಕ್ಕೆ ಆವರಣ ಗೋಡೆ ಅವಶ್ಯಕತೆ ಇದೆ ಎಂದು ಮನವಿ ಸಲ್ಲಿಸಿದರು.
ಮಸೀದಿಯ ನಿಕಟಪೂರ್ವ ಅಧ್ಯಕ್ಷ ಫಾರೂಕ್ ಉಳ್ಳಾಲ್ ಮಾತನಾಡಿದರು.
ಖತೀಬ್ ಮಹಮ್ಮದ್ ಅಲಿ ಮದನಿ ಉದ್ಘಾಟಿಸಿದರು. ಧರ್ಮಗುರುಗಳಾದ ಮೊಹಿದ್ದೀನ್ ಮುಸ್ಲಿಯಾರ್, ಹಾರಿಸ್ ಸಖಾಫಿ, ಸಿದ್ದೀಕ್ ಝುಹ್ರಿ, ಉಸ್ಮಾನ್ ಮದನಿ, ಇರ್ಫಾನ್ ಮದನಿ, ಅಶ್ರಫ್ ಮುಸ್ಲಿಯಾರ್, ಮಸೀದಿಯ ಕಾರ್ಯದರ್ಶಿ ಅಬ್ದುಲ್ ರಹ್ಮಾನ್, ಕೋಶಾಧಿಕಾರಿ ರಶೀದ್ ಮಹಮ್ಮದ್, ಉಪಾಧ್ಯಕ್ಷ ಕಬೀರ್ ಬುಖಾರಿ,ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ನಿಕಟಪೂರ್ವ ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಸಮಿತಿ ಸದಸ್ಯರಾದ ಮಯ್ಯದ್ದಿ, ಮುಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.
ಅಬ್ದುಲ್ ರಹೀಂ ಮುಟ್ಟಿಕ್ಕಲ್ ಕಾರ್ಯಕ್ರಮ ನಿರೂಪಿಸಿದರು.