ಉಳ್ಳಾಲ | ಉಚ್ಚಿಲ ಉರೂಸ್‌ನ ಧ್ವಜಾರೋಹಣ, ಪೋಸ್ಟರ್ ಬಿಡುಗಡೆ

ಉಳ್ಳಾಲ : ಜುಮಾ ಮಸೀದಿ ಉಚ್ಚಿಲ ಸೋಮೇಶ್ವರ 407 ಇಲ್ಲಿ ಅಂತ್ಯ ವಿಶ್ರಮಿಸುತ್ತಿರುವ ಅಸಯ್ಯಿದ್ ಶರೀಫುಲ್ ಅರೆಬಿ ವಲಿಯುಲ್ಲಾಹಿ (ಖ.ಸಿ.) ಅವರ ಹೆಸರಿನಲ್ಲಿ 2026ರ ಜನವರಿ ತಿಂಗಳಲ್ಲಿ ನಡೆಯಲಿರುವ ಉರೂಸ್ ನೇರ್ಚೆ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದ ಧ್ವಜಾರೋಹಣ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಈ ವೇಳೆ ಸ್ಥಳೀಯ ಖತೀಬ್ ಇಬ್ರಾಹಿಂ ಫೈಝಿ ದುಆ ನೆರವೇರಿಸಿದರು.
ಜನವರಿ 15 ರಿಂದ 25 ರವರೆಗೆ ಉಚ್ಚಿಲ ಉರೂಸ್ ನಡೆಯಲಿದ್ದು, 11 ದಿನಗಳ ಕಾಲ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಜನವರಿ 25 ಭಾನುವಾರ ಬೆಳಿಗ್ಗೆ 10 ಗಂಟೆಗೆ ಅನ್ನದಾನ ನಡೆಯಲಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಪ್ಪಳ ಹೇಳಿದರು
ಕಾರ್ಯಕ್ರಮದಲ್ಲಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಯು.ಎನ್.ಅಬ್ಬಾಸ್, ಕಾರ್ಯದರ್ಶಿ ಅಹ್ಮದ್ ಪೆರಿಬೈಲ್, ಕೌನ್ಸಿಲರ್ ಅಬ್ದುಲ್ ಸಲಾಮ್ ಯು., ಉಪಾಧ್ಯಕ್ಷ ಅಬ್ಬಾಸ್ ಹಾಜಿ ಪೆರಿ ಬೈಲ್, ಕೋಶಾಧಿಕಾರಿ ಹಸೈನಾರ್ ಹಾಜಿ, ಉರೂಸ್ ಸಮಿತಿ ಕೋಶಾಧಿಕಾರಿ ಯು.ಬಿ.ಎಂ. ಹಾಜಿ, ಉರೂಸ್ ಸಮಿತಿ ಕಾರ್ಯದರ್ಶಿ ಅಬೂಬಕರ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಮೊಹಶಿಮ್ ರಹ್ಮಾನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.





