ಕೊಪ್ಪಳ ವಿಮೆನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾಧ್ಯಕ್ಷೆಯಾಗಿ ಉಮ್ಮೇ ರುಮಾನ ಆಯ್ಕೆ

ಕೊಪ್ಪಳ: ವಿಮೆನ್ ಇಂಡಿಯಾ ಮೂವ್ಮೆಂಟ್ ಕೊಪ್ಪಳ ಜಿಲ್ಲಾ ಪ್ರತಿನಿಧಿ ಸಭೆಯು ಶನಿವಾರ ಕುಷ್ಟಗಿಯಲ್ಲಿ ನಡೆಯಿತು.
ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಝಹೀರ್ ಅಬ್ಬಾಸ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ನೂತನ ಜಿಲ್ಲಾಧ್ಯಕ್ಷೆಯಾಗಿ ಉಮ್ಮೇ ರುಮಾನ ಗಂಗಾವತಿ, ಉಪಾಧ್ಯಕ್ಷೆಯಾಗಿ ಸದಾಫ್ ಕುಷ್ಟಗಿ, ಪ್ರಧಾನ ಕಾರ್ಯದರ್ಶಿ ಯಾಗಿ ಶಾಹಿನ್, ಕಾರ್ಯದರ್ಶಿಯಾಗಿ ಝೈನಬ್, ಕೋಶಾಧಿಕಾರಿಯಾಗಿ ತಬಸ್ಸುಮ್ ಪರ್ವೀನ್ ಹಾಗೂ ಜಿಲ್ಲಾ ಸಮಿತಿ ಸದಸ್ಯರಾಗಿ ಶಾಹಿನ್ ಬೇಗಂ, ಶಮಾ, ರಜಿಯಾ ಸುಲ್ತಾನ, ಶಾಹಿಸ್ತಾ ಆಯ್ಕೆಯಾದರು.
ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೂಸುಫ್ ಮೋದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ‘ಅನ್ಯಾಯದ ವಿರುದ್ಧ ಒಂದಾಗಿ ಸೆಟೆದು ನಿಲ್ಲಿರಿ’ ರಾಷ್ಟ್ರೀಯ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
Next Story





