ಪ್ರಾಥಮಿಕ - ಪ್ರೌಢಶಾಲೆಗಳ ಮಕ್ಕಳಿಗೆ ಉಚಿತ ಶೂ, ಸಾಕ್ಸ್‌ಗೆ ಬದಲಾಗದ ಬಜೆಟ್

ಮಂಗಳೂರು, ಆ.21: ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಸರಕಾರ ನೀಡುವ ಉಚಿತ ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟದ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರು ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಸುಮಾರು 40 ಲಕ್ಷ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್‌ಗಳನ್ನು ವಿತರಿಲಾಗುತ್ತಿದೆ. ಈ ವರ್ಷ ಈ ಉದ್ದೇಶಕ್ಕಾಗಿ 111 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಶಾಲಾಭಿವೃದ್ಧಿ ಮತ್ತು ಮೇಲ್ವೀಚಾರಣಾ ಸಮಿತಿಯು ಶೂ ಮತ್ತು ಸಾಕ್ಸ್‌ಗಳ ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ.
1 ರಿಂದ 5 ನೇ ತರಗತಿಳ ಮಕ್ಕಳಿಗೆ ಪ್ರತಿ ಸೆಟ್‌ಗೆ 265 ರೂ., 6 ರಿಂದ 8 ನೇ ತರಗತಿಗಳಿಗೆ 295 ರೂ. ಮತ್ತು 9 ರಿಂದ 10 ನೇ ತರಗತಿಗಳಿಗೆ ವಿತರಿಸಲಾಗುವ ಶೂ , ಸಾಕ್ಸ್‌ಗಳ 325 ರೂ.ಗಳ ಬಜೆಟ್ ನಿಗದಿಪಡಿಸಲಾಗಿದೆ.
ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನಾಲ್ಕು ತಿಂಗಳ ಕಾಲ ಮಳೆ ಇರುವ ಕಾರಣಕ್ಕಾಗಿ ಶೂಗಳ ಬದಲಿಗೆ ಚಪ್ಪಲಿ ಗಳನ್ನು ವಿತರಿಸಲಾಗುತ್ತದೆ.
ವಿದ್ಯಾರ್ಥಿಗಳ ಹಾಜರಾತಿಯನ್ನು ಉತ್ತೇಜಿಸಲು ಶಿಕ್ಷಣ ಇಲಾಖೆ 2015-16 ರಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿತ್ತು. ಬಳಿಕ ಪ್ರತಿವರ್ಷ ಪಾದರಕ್ಷೆಗಳ ಖರೀದಿಗೆ ಬಜೆಟ್ ಹಂಚಿಕೆ ಒಂದೇ ಆಗಿದೆ. ವಸ್ತುಗಳ ಬೆಲೆ ಹೆಚ್ಚಾದರೂ ಸರಕಾರ ಬಜೆಟ್‌ನ ಹೆಚ್ಚಳಕ್ಕೆ ಗಮನ ಹರಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಮಾರಾಟಗಾರರಿಂದ ಕೊಟೇಶನ್ ತೆಗೆದುಕೊಂಡ ನಂತರ ಎಸ್‌ಡಿಎಂಸಿ ತಮ್ಮ ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ಪೂರೈಸಲು ಶ್ರಮಿಸುತ್ತಿದೆ.
ಸೆಪ್ಟೆಂಬರ್ ಬಳಿಕ ಅವುಗಳನ್ನು ನೀಡಲಾಗುತ್ತದೆ. ಆದರೆ ಮಕ್ಕಳಿಗೆ ನೀಡಲಾಗುವ ಶೂಗಳು ಆರು ತಿಂಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ ಎಂಬ ಆರೋಪ ಇದೆ. ಹೀಗಾಗಿ ಶೂ ಸಾಕ್ಸ್‌ಗಳ ಗುಣಮಟ್ಟದ ಬಗ್ಗೆಯೂ ಶಿಕ್ಷಣ ಇಲಾಖೆ ಗಮನ ಹರಿಸಬೇಕು ಎಂದು ಎಸ್‌ಡಿಎಂಸಿ ಅಭಿಪ್ರಾಯಪಟ್ಟಿದೆ.
ಇಲಾಖೆಯ ನಿಯಮದಂತೆ ಸಾಕ್ಸ್ ಮತ್ತು ಶೂ ಐಎಸ್‌ಐ ಮಾರ್ಕ್‌ನದ್ದಾಗಿರಬೇಕು. ಸರಕಾರ ನೀಡಿದ ಶೂಗಳನ್ನು ಸಮವಸ್ತ್ರದೊಂದಿಗೆ ಮಾತ್ರ ಬಳಸಬೇಕು. ಆದರೆ ಮಕ್ಕಳು ಎಲ್ಲ ಸಮಯದಲ್ಲಿಯೂ ಇದನ್ನು ಬಳಸುತ್ತಿದ್ದಾರೆ. ಹೀಗಾಗಿ ಶೂ ಬೇಗ ಹಾಳಾಗುತ್ತದೆ ಎಂದು ತಿಳಿದು ಬಂದಿದೆ.







