14 ವರ್ಷದೊಳಗಿನ ಬಾಲಕ- ಬಾಲಕಿಯರ ಅತ್ಲೆಟಿಕ್ಸ್ ಕ್ರೀಡಾಕೂಟ: ಶೋನಿತ್ ಸ್ಯಾಮ್ಸನ್ ರಾಷ್ಟ್ರಮಟ್ಟಕ್ಕೆ ಆಯ್ಕೆ

ಮಂಗಳೂರು, ನ.25: ಹಾಸನದಲ್ಲಿ ಇತ್ತೀಚೆಗೆ ಜರುಗಿದ ರಾಜ್ಯಮಟ್ಟದ 14ರ ವಯೋಮಿತಿಯ ಬಾಲಕ-ಬಾಲಕಿಯರ ಅತ್ಲೆಟಿಕ್ಸ್ 2025-26ರ ಕ್ರೀಡಾಕೂಟದಲ್ಲಿ ಜೆಪ್ಪುವಿನ ಸಂತ ಜೆರೋಸಾ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಶೋನಿತ್ ಸ್ಯಾಮ್ಸನ್ ಮಾಬೆನ್ ಓಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶೋನಿತ್ 100 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದರೆ, 200 ಮೀ. ಓಟದಲ್ಲಿ ಬೆಳ್ಳಿಯ ಪದಕ ಗಳಿಸಿ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಅತ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಮಂಗಳ ಅತ್ಲೆಟಿಕ್ಸ್ ಕ್ಲಬ್ ನ ತರಬೇತುದಾರ ದಿನೇಶ್ ಕುಂದರ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವ ಶೋನಿತ್ ಸ್ಯಾಮ್ಸನ್ ಅವರು ಜೆಪ್ಪು ಬಪ್ಪಾಲ್ ನ ಶೈಲೇಶ್ ಮಾಬೆನ್ ಮತ್ತು ಸರಿತಾ ಮಾಬೆನ್ ದಂಪತಿಯ ಪುತ್ರ.
Next Story







