ಯುನಿವೆಫ್ -ವಾಟ್ಸಪ್ ಅಡ್ಮಿನ್ ಗಳ ಸ್ನೇಹ ಮಿಲನ

ಮಂಗಳೂರು: ಯುನಿವೆಫ್ ಕರ್ನಾಟಕ ಇದರ 20 ನೇ ವರ್ಷದ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಅಂಗವಾಗಿ "ವಾಟ್ಸಪ್ ಅಡ್ಮಿನ್ ಗಳ ಸ್ನೇಹ ಮಿಲನ" ಕಾರ್ಯಕ್ರಮವು ಫಳ್ನೀರ್ ನಲ್ಲಿರುವ ದಾರುಲ್ ಇಲ್ಮ್ ನ ಅಲ್ ವಹ್ದಃ ಸಭಾಂಗಣದಲ್ಲಿ ಜರಗಿತು.
ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ದಿಕ್ಸೂಚಿ ಭಾಷಣ ಮಾಡಿದರು.
ಮುಸ್ಲಿಮ್ ವಾಯ್ಸ್ ನ ಮುಹಮ್ಮದ್ ಹನೀಫ್ ಯು, ಪಬ್ಲಿಕ್ ವಾಯ್ಸ್ ನ ಶಂಸುದ್ದೀನ್, ಅಬ್ದುಲ್ ಗಫೂರ್, ಹಾರೂನ್ ರಶೀದ್, ರಫೀಕ್ ಆಲಂಪಾಡಿ, ಸಾಹುಲ್ ಹಮೀದ್, ಸಲೀಂ ಚಲ್ಲಿ ಮೊದಲಾದವರು ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಫಹೀಮುದ್ದೀನ್ ಕುದ್ರೋಳಿ ಕಿರಾಅತ್ ಪಠಿಸಿದರು. ಸಂಚಾಲಕ ಯು ಕೆ ಖಾಲಿದ್ ಸ್ವಾಗತಿಸಿದರು. ಮುಹಮ್ನದ್ ಆಸಿಫ್ ಕಾರ್ಯಕ್ರಮ ನಿರೂಪಿಸಿದರು.
Next Story





