ಉಪ್ಪಿನಂಗಡಿ: ಕೋಳಿಅಂಕ ನಡೆಸುತ್ತಿದ್ದ ಪ್ರಕರಣ; ಓರ್ವ ಆರೋಪಿ ಸೆರೆ, ಸೊತ್ತು ವಶಕ್ಕೆ

ಉಪ್ಪಿನಂಗಡಿ : ಇಲ್ಲಿನ ಕಜೆಕ್ಕಾರ್ ಗುಡ್ದ ಎಂಬಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಕೋಳೀ ಅಂಕ ನಡೆಸಲಾಗುತ್ತಿದ್ದ ಪ್ರದೇಶಕ್ಕೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ಮೂರು ಕೋಳಿ, ಮೂರು ದ್ವಿ ಚಕ್ರವಾಹನಗಳ ಸಹಿತ ಓರ್ವನನ್ನು ಬಂಧಿಸಿದ ಘಟನೆ ವರದಿಯಾಗಿದೆ.
ಬಂಧಿತನನ್ನು ಉರುವಾಲು ಗ್ರಾಮದ ನೋಣಯ್ಯ ಮುಗೇರ ಎಂದು ಗುರುತಿಸಲಾಗಿದ್ದು, ಘಟನಾ ಸ್ಥಳದಿಂದ ಪೊಲೀಸ್ ದಾಳಿಯ ವೇಳೆ ಪರಾರಿಯಾದವರನ್ನು ವಿಜಯ ಕಜೆಕ್ಕಾರ್, ರವಿ ಕಜೆಕ್ಕಾರ್, ಉದಯ ಪೆರಿಯಡ್ಕ ಮತ್ತು ಇತರ ಇಬ್ಬರು ಎಂದು ಗುರುತಿಸಲಾಗಿದೆ.
ಬಂಧಿತನಿಂದ ಕೋಳಿ ಅಂಕಕ್ಕೆ ಬಳಸಲಾಗುತ್ತಿರುವ ಸಲಕರಣೆಗಳನ್ನು ಜೂಜಿಗೆ ಬಳಸಲಾಗಿದ್ದ ನಗದು ಹಣವನ್ನು ವಶಪಡಿಸಿಕೊಂಡಿದ್ದು, ಪೊಲೀಸ್ ಉಪ ನಿರೀಕ್ಷಕ ಸುರೇಶ್ ಸಿ ಟಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
Next Story





