Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಉಪ್ಪಿನಂಗಡಿ: ಹಿಂದುತ್ವ ಸಂಘಟನೆ...

ಉಪ್ಪಿನಂಗಡಿ: ಹಿಂದುತ್ವ ಸಂಘಟನೆ ಕಾರ್ಯಕರ್ತರಿಂದ ಕಟ್ಟಡಕ್ಕೆ ನುಗ್ಗಿ ಕೂಲಿ ಕಾರ್ಮಿಕರ ಮೇಲೆ ಹಲ್ಲೆ

ನಮ್ಮ ರಕ್ಷಣೆಗೆ ಸ್ಥಳೀಯ ಮುಸ್ಲಿಮ್‌ ಯುವಕರು ಬಂದಿದ್ದರು: ಭವಿಷ್ ರೈ

ವಾರ್ತಾಭಾರತಿವಾರ್ತಾಭಾರತಿ5 Oct 2023 11:35 PM IST
share
ಉಪ್ಪಿನಂಗಡಿ: ಹಿಂದುತ್ವ ಸಂಘಟನೆ ಕಾರ್ಯಕರ್ತರಿಂದ ಕಟ್ಟಡಕ್ಕೆ ನುಗ್ಗಿ ಕೂಲಿ ಕಾರ್ಮಿಕರ ಮೇಲೆ ಹಲ್ಲೆ

ಉಪ್ಪಿನಂಗಡಿ: ಕಟ್ಟಡದ ವಿಚಾರವೊಂದಕ್ಕೆ ಸಂಬಂಧಿಸಿ ಹಿಂದುತ್ವ ಸಂಘಟನೆಗೆ ಸೇರಿದ ಯುವಕ ತಂಡ ಕಟ್ಟಡಕ್ಕೆ ನುಗ್ಗಿ ಅಲ್ಲಿದ್ದ ಕೂಲಿ ಕಾರ್ಮಿಕರಿಗೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಈ ವೇಳೆ ಸ್ಥಳೀಯ ಯುವಕರು ಹಲ್ಲೆಗೊಳಗಾದವರನ್ನು ರಕ್ಷಿಸಲು ಮುಂದಾದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ.

ಈ ಘಟನೆ ಸೆ.23ರಂದು ಉಪ್ಪಿನಂಗಡಿಯಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಾಂಗಟು ಪಾಸ್ವಾನ್ (35) ಎಂಬವರು ಕಳೆದ ಸೆ.24ರಂದು ದೂರು ನೀಡಿದ್ದು, ತಾನು 34 ನೆಕ್ಕಿಲಾಡಿಯ ಜಗಜ್ಜೀವನ್ ರೈ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಸೆ.23ರಂದು ಉಪ್ಪಿನಂಗಡಿಯ ಬಸ್ ನಿಲ್ದಾಣದ ಬಳಿ ನನ್ನ ಧಣಿಗೆ ಸೇರಿದ ಹಳೆಯ ಕಟ್ಟಡದ ದುರಸ್ತಿ ಮಾಡುತ್ತಿದ್ದ ಸಂದರ್ಭ ಮಧ್ಯಾಹ್ನ ಆರೋಪಿಗಳಾದ ಉಪ್ಪಿನಂಗಡಿ ನಿವಾಸಿ ಸುದರ್ಶನ ಹಾಗೂ 10-15 ಮಂದಿ ಅಕ್ರಮ ಪ್ರವೇಶ ಮಾಡಿ ಜಾತಿ ನಿಂದನೆ ಮಾಡಿ, ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಬಿಡಿಸಲು ಬಂದ ಜಗಜ್ಜೀವನ್ ರೈಯವರಿಗೆ 10-15 ಮಂದಿ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಜಗಜ್ಜೀವನ್ ರೈ ಹಾಗೂ ಆರೋಪಿ ಸುದರ್ಶನ್‍ಗೂ ಕಟ್ಟಡದ ವಿಚಾರದಲ್ಲಿ ತಕರಾರು ಇದ್ದು, ಜಗಜ್ಜೀವನ್ ಕಟ್ಟಡದ ದುರಸ್ತಿ ಕೆಲಸ ಮಾಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸುದರ್ಶನ್‍ ಈ ಕೃತ್ಯವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವೈರಲ್ ವಿಡಿಯೋದಲ್ಲೇನಿದೆ?: ಈ ಪ್ರಕರಣ ನಡೆದು ಹಲವು ದಿನಗಳಾದರೂ, ಹಲ್ಲೆಯ ವಿಡಿಯೋ ಅ. 5ರಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪ್ರಕರಣದ ಆರೋಪಿ ಸುದರ್ಶನ್ ಎಂಬಾತ ವಿಶ್ವ ಹಿಂದೂ ಪರಿಷತ್‍ನ ಉಪ್ಪಿನಂಗಡಿ ಪ್ರಖಂಡದ ಅಧ್ಯಕ್ಷನಾಗಿದ್ದು, ಆತ ಸೇರಿದಂತೆ 10-15 ಜನರು ಈ ಕಟ್ಟಡದೊಳಗೆ ನುಗ್ಗಿ ಅಲ್ಲಿ ಕೆಲಸ ಮಾಡುತ್ತಿದ್ದವರನ್ನು ಹೊರಗಡೆ ದೂಡುವ ಹಾಗೂ ಜಗಜ್ಜೀವನ್ ರೈ ಸೇರಿದಂತೆ ಕೆಲವರಿಗೆ ಹಲ್ಲೆ ಮಾಡುವ ದೃಶ್ಯ ದಾಖಲಾಗಿದೆ. ಈ ಹಲ್ಲೆ ನಡೆಸಿದ 10- 15 ಜನ ಬಜರಂಗದಳ- ವಿಶ್ವಹಿಂದೂಪರಿಷತ್ ಸಂಘಟನೆಯಲ್ಲಿ ಗುರುತಿಸಿಕೊಂಡವರೆನ್ನಲಾಗಿದ್ದು, ಇದರಲ್ಲಿ ಓರ್ವ ಭರತ್ ಕುಮ್ಡೇಲು ಎಂದು ತಿಳಿದುಬಂದಿದೆ.

ಈ ಹಲ್ಲೆ ನಡೆದ ಸಂದರ್ಭ ಸ್ಥಳೀಯ ಕೆಲವು ಯುವಕರು ಹಲ್ಲೆಗೊಳಗಾದವರ ರಕ್ಷಣೆಗೆ ಮುಂದಾಗಿದ್ದು ಕಂಡು ಬರುತ್ತಿದೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿ, ಘಟನೆಯ ಬಗ್ಗೆ ವಿವರಿಸಿದ ಜಗಜ್ಜೀವನ್ ರೈ ಅವರ ಪುತ್ರ ಭವಿಷ್ ಜೆ. ರೈ, ನನ್ನ ತಂದೆಗೆ ಹಾಗೂ ದರ್ಶನ್ ಎಂಟರ್‍ಪ್ರೈಸಸ್‍ನ ಸುದರ್ಶನ್‌ಗೆ ಸುಮಾರು 45 ವರ್ಷದಿಂದ ಈ ಕಟ್ಟಡದ ಬಗ್ಗೆ ವಿರೋಧವಿದೆ. ಇದರ ಬಗ್ಗೆ ಸುದರ್ಶನ್ ತಂದೆ 1983ರಲ್ಲಿ ದಾವೆ ಹೂಡಿದ್ದರು. ಇದು ಧರ್ಮಸ್ಥಳದ ಮೂಲ ಗೇಣಿಯಲ್ಲಿರುವ ಜಾಗ. ಇಲ್ಲಿ ಕಟ್ಟಡ ಕಟ್ಟಿದ್ದು ತನ್ನ ತಂದೆ ಜಗಜ್ಜೀವನ್ ರೈಯವರ ತಂದೆ ಬಾಳಪ್ಪ ರೈ.

ಇದರಲ್ಲಿ ಸುದರ್ಶನ್‌ಗೆ ಯಾವುದೇ ಹಕ್ಕಿಲ್ಲ. ನ್ಯಾಯಾಲಯದಲ್ಲಿ ಅಫೀಲು ಮಾಡುತ್ತಲೇ ಇದ್ದು, ಈಗ ಇದು ಹೈಕೋರ್ಟ್‍ನಲ್ಲಿದೆ. 2018ರಲ್ಲಿ ಈ ಕಟ್ಟಡಕ್ಕೆ ಸುದರ್ಶನ್ ಬೆಂಕಿ ಕೊಟ್ಟಿದ್ದು, ಆ ಬಗ್ಗೆ ಎಫ್‍ಐಆರ್ ಕೂಡಾ ದಾಖಲಾಗಿದೆ. ಇದರ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಇದನ್ನು ದುರಸ್ತಿ ಮಾಡಿಸಬಾರದು ಎಂದು ಸುದರ್ಶನ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದ. ಆದರೆ ಆ ತಡೆಯಾಜ್ಞೆ ವಜಾವಾಗಿದೆ. ಆದ್ದರಿಂದ ನಾವು ಮೇಲ್ಚಾವಣಿ ರಿಪೇರಿಗೆ ಮುಂದಾಗಿದ್ದೆವು ಎಂದು ಭವಿಷ್ ತಿಳಿಸಿದರು.

ಸೆ.8ರಂದು ಕೂಡಾ ಸುದರ್ಶನ್ ಸ್ಥಳೀಯ ಯುವಕರ ತಂಡವನ್ನು ಕಟ್ಟಿಕೊಂಡು ಬಂದು ಕಟ್ಟಡದೊಳಗೆ ಅಕ್ರಮ ಪ್ರವೇಶ ಮಾಡಿ ಪಿಲ್ಲರ್‍ಗಳಿಗೆ ಹಾನಿಯೆಸಗಿದ್ದ. ಈ ಬಗ್ಗೆಯೂ ಪ್ರಕರಣ ದಾಖಲಾಗಿದೆ. ಸೆ.23ರಂದು ನಾವು ಮೇಲ್ಚಾವಣಿಯ ಕೆಲಸಕ್ಕೆ ಮುಂದಾದಾಗ ಭರತ್ ಕುಂಮ್ಡೇಲು, ಉದಯ ಸವಣೂರು ಸೇರಿದಂತೆ 10-15 ಜನ ಬಂದು ಕಟ್ಟಡದೊಳಗೆ ನುಗ್ಗಿ, ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಭವಿಷ್ ವಿವರಿಸಿದ್ದಾರೆ.

ನೀವು ಬಜರಂಗದಳ ಅಂತ ಹೆಸರು ಹೇಳಿಕೊಂಡು ಬಂದು ಹಿಂದೂಗಳಿಗೆ ಅನ್ಯಾಯ ಮಾಡುವುದು ಸರಿಯಲ್ಲ ಅಂತ ನಾವು ಹೇಳಿದ್ದೆವು. ಆಗ ಪೊಲೀಸರು ಬಂದು ಕೆಲಸ ನಿಲ್ಲಿಸಲು ಸೂಚಿಸಿದ್ದರಲ್ಲದೆ, ಸಂಜೆ 3 ಗಂಟೆಗೆ ವೃತ್ತ ನಿರೀಕ್ಷಕರು ಬರುತ್ತಾರೆ. ಆಗ ಎರಡೂ ಕಡೆಯವರು ಬಂದು ಮಾತನಾಡಿ ಎಂದು ಹೇಳಿ ಹೋಗಿದ್ದರು. ಹಾಗಾಗಿ ನಾವು ಕೆಲಸ ನಿಲ್ಲಿಸಿದ್ದೆವು. ನಾನು ಮಧ್ಯಾಹ್ನ 2:30ಕ್ಕೆ ಪೊಲೀಸ್ ಠಾಣೆಗೆ ತೆರಳಿದ್ದೆ. ಸುದರ್ಶನ್‍ ಠಾಣೆಗೆ ಬಂದು ಮಾತನಾಡದೆ ಆ ಹೊತ್ತಿನಲ್ಲಿ ಏಕಾಏಕಿ ಜನರನ್ನು ಕಟ್ಟಿಕೊಂಡು ಬಂದು ಅಲ್ಲಿ ಕೆಲಸದವರು ಚಾ ಕುಡಿಯುತ್ತಿದ್ದ ಸಂದರ್ಭ ಕಟ್ಟಡದೊಳಗೆ ನುಗ್ಗಿ ಹಲ್ಲೆ ನಡೆಸಿದ್ದಾನೆ. ಆಗ ನಮ್ಮ ರಕ್ಷಣೆಗೆ ಸ್ಥಳೀಯ ಮುಸ್ಲಿಮ್‌ ಯುವಕರು ಬಂದಿದ್ದರು ಎಂದು ಭವಿಷ್ ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X