ಉಪ್ಪಿನಂಗಡಿ | ತೀವ್ರ ಗಾಳಿ, ಮಳೆಗೆ ಮಣ್ಣು ಕುಸಿತ: ಅಪಾಯದಂಚಿನಲ್ಲಿ ಮನೆ

ಉಪ್ಪಿನಂಗಡಿ : ಗಾಳಿ ಸಹಿತ ಮಳೆ ಸೋಮವಾರವು ಮುಂದುವರೆದಿದ್ದು, ಮಣ್ಣು ಕುಸಿತದಿಂದಾಗಿ ಇಳಂತಿಲ ಗ್ರಾಮದ ಅಂಡೆತ್ತಡ್ಕ ನಿವಾಸಿ ಯಾಕೂಬ್ ಅವರ ಮನೆ ಅಪಾಯದಂಚಿನಲ್ಲಿದೆ.
ಘಟನಾ ಸ್ಥಳಕ್ಕೆ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದ್ದು, ಮನೆಯ ನಿವಾಸಿಗಳನ್ನು ಸ್ಥಳಾಂತರಗೊಳಿಸಿದ್ದಾರೆ.
ಯಾಕೂಬ್ ಅವರು ಆರ್ಥಿಕವಾಗಿ ಹಿಂದುಳಿದಿದ್ದು, ಮಣ್ಣು ಕುಸಿತದಿಂದ ಅಪಾರ ನಷ್ಟವಾಗಿದೆ.
Next Story





