ಉಪ್ಪಿನಂಗಡಿಯ ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು

ಮಂಗಳೂರು, ಡಿ.5: ನಗರದ ಪೊಲೀಸ್ ಲೇನ್‌ನಲ್ಲಿ ವಾಸವಾಗಿರುವ ಪೊಲೀಸ್ ಅಧಿಕಾರಿಯ ಮನೆಗೆ ಬಂದಿದ್ದ ಉಪ್ಪಿನಂಗಡಿಯ ಮಠ ಹಿರ್ತಡ್ಕ ನಿವಾಸಿ ಮುಹಮ್ಮದ್ ಅಶ್ರಫ್ (49) ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ.2ರಂದು ಬೆಳಗ್ಗೆ 6:30ಕ್ಕೆ ತನ್ನ ಸ್ಕೂಟರ್‌ನಲ್ಲಿ ಪೊಲೀಸ್ ಲೇನ್‌ನ ಮನೆಗೆ ಬಂದಿದ್ದ ಅಶ್ರಫ್ 7 ಗಂಟೆಗೆ ಉಪ್ಪಿನಂಗಡಿಗೆ ಹೋಗುವುದಾಗಿ ತೆರಳಿದ್ದಾರೆ. ಆದರೆ ಅಲ್ಲಿಂದ ಮನೆಗೆ ಹೋಗದೆ ನಾಪತ್ತೆಯಾಗಿರುವುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಅಶ್ರಫ್‌ರನ್ನು ನಗರದ ವಿವಿಧೆಡೆ ಹುಡುಕಲಾಗಿದ್ದು, ಅವರ ಸ್ಕೂಟರ್ ರೈಲ್ವೇ ಸ್ಟೇಷನ್ ಬಳಿ ಪತ್ತೆಯಾಗಿದೆ. 5.4 ಅಡಿ ಎತ್ತರದ, ಸಪೂರ ಶರೀರದ, ಗೋಧಿ ಮೈ ಬಣ್ಣದ, ಸಾಧಾರಣ ಮೈಕಟ್ಟು ಹೊಂದಿರುವ ಅಶ್ರಫ್ ಉದ್ದ ತೋಳಿನ ಚೆಕ್ಸ್ ಶಟ್, ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕನ್ನಡ, ತುಳು, ಬ್ಯಾರಿ ಭಾಷೆ ಬಲ್ಲ ಅಶ್ರಫ್‌ರನ್ನು ಕಂಡವರು ಪಾಂಡೇಶ್ವರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
Next Story





