ಉಪ್ಪಿನಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ನ 2025-26ನೇ ಸಾಲಿನ ವಾರ್ಷಿಕ ಮಹಾಸಭೆ
ರೇಂಜನ್ನು ಕೋಲ್ಪೆ, ಉಪ್ಪಿನಂಗಡಿ ರೇಂಜ್ ಎಂದು ವಿಂಗಡಿಸಲು ತೀರ್ಮಾನ

ವಾರ್ಷಿಕ ಮಹಾಸಭೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬ್ದುಲ್ ಜಬ್ಬಾರ್ ಅಸ್ಲಮಿ ಬಂಗೇರಕಟ್ಟೆಯವರು ಮಾತನಾಡಿದರು.
ಉಪ್ಪಿನಂಗಡಿ: SKJMCC ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಉಪ್ಪಿನಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಮೇ 6 ಮಂಗಳವಾರ ಬೆಳಿಗ್ಗೆ 9:45ಕ್ಕೆ ಇಲ್ಲಿನ ಇಂಡಿಯನ್ ಸ್ಕೂಲ್ ಸಭಾಂಗಣದಲ್ಲಿ ಸಮಸ್ತ ಮುಫತ್ತಿಶ್ ಜೆ ಪಿ ಮುಹಮ್ಮದ್ ದಾರಿಮಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು.
ಕರುವೇಲು ಖತೀಬ್ ಉಸ್ತಾದ್ ಬಹು ಸಯ್ಯದ್ ಅನಸ್ ತಂಙಳ್ ಪ್ರಾರ್ಥನೆ ಸಲ್ಲಿಸಿದರು. ಉಪ್ಪಿನಂಗಡಿಯ ಮಾಲಿಕ್ ದೀನಾರ್ ಜುಮಾ ಮಸೀದಿ ಮುದರ್ರಿಸ್ ಉಸ್ತಾದ್ ಅಬ್ದುಲ್ ಸಲಾಂ ಫೈಝಿ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಅಸ್ಲಮಿ ಸ್ವಾಗತಿಸಿ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.
ಪ್ರಸಕ್ತ ಅಧ್ಯಯನ ವರ್ಷದ ಕಾರ್ಯಚುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿ ಮುಫತ್ತಿಶ್ ಉಸ್ತಾದ್ ಹಾಗೂ ಸಮಸ್ತ ಮುದರ್ರಿಬ್ ತಾಜುದ್ದೀನ್ ರಹ್ಮಾನಿ ವಿಷಯ ಮಂಡಿಸಿದರು.
ಸಮಸ್ತ 100 ವಾರ್ಷಿಕ ಪ್ರಚಾರ ಸಭೆ ಹಾಗೂ ಉಪ್ಪಿನಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ಗೋಲ್ಡನ್ ಜುಬಿಲಿ ಬಹಳ ವಿಜ್ರಂಭಣೆಯಿಂದ ನಡೆಸಲು ತೀರ್ಮಾನಿಸಲಾಯಿತು. SKJMCC ನಿರ್ದೇಶನದಂತೆ ಉಪ್ಪಿನಂಗಡಿ ರೇಂಜನ್ನು ಕೋಲ್ಪೆ ಹಾಗೂ ಉಪ್ಪಿನಂಗಡಿ ರೇಂಜ್ ಎಂದು ವಿಂಗಡಿಸಲು ತೀರ್ಮಾನಿಸಲಾಯಿತು.
2025-26ನೇ ಸಾಲಿನ ನೂತನ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಇಸ್ಹಾಕ್ ಫೈಝಿ ಕೋಲ್ಪೆ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ. ಅಬ್ದುಲ್ ಜಬ್ಬಾರ್ ಅಸ್ಲಮಿ ಬಂಗೇರಕಟ್ಟೆ, ಕೋಶಾಧಿಕಾರಿಯಾಗಿ ಅಬ್ದುರ್ರಹ್ಮಾನ್ ಹಾಜಿ ಕೊಲ್ಲೆಜಾಲ್, ಪರೀಕ್ಷಾ ಬೋರ್ಡ್ ಚೇರ್ಮೆನ್ ಆಗಿ ಅಬ್ದುಲ್ ರಝಾಕ್ ದಾರಿಮಿ ಕರಾಯ, ಉಪಾದ್ಯಕ್ಷರುಗಳಾಗಿ ಹಾರಿಸ್ ಕೌಸರಿ ಹಳೆಗೇಟು, ಖಲಂದರ್ ಶಾಫಿ ಅಝ್ಹರಿ ಮಠ, ಕಾರ್ಯದರ್ಶಿಗಳಾಗಿ ಅಬ್ದುಲ್ ಅಝೀಝ್ ಫೈಝಿ ಆದರ್ಶ ನಗರ, ಮನ್ಸೂರ್ ಯಮಾನಿ ಅಲ್ ಮುರ್ಶಿದಿ ಉಪ್ಪಿನಂಗಡಿ, ಪರೀಕ್ಷಾ ಬೋರ್ಡ್ ವೈಸ್ ಚೇರ್ಮೆನ್ ಆಗಿ ಕೆ. ಎಂ. ಸಿದ್ದೀಕ್ ಫೈಝಿ ಅಂಡೆತ್ತಡ್ಕ, ಝಕರಿಯಾ ಮುಸ್ಲಿಯಾರ್ ಪವಿತ್ರ ನಗರ, SKSBV ಚೇರ್ಮೆನ್ ಆಗಿ ಮುಸ್ತಫಾ ಫೈಝಿ ಬೋಳದಬೈಲ್, SKSBV ಜನರಲ್ ಕನ್ವೀನರಾಗಿ ಹಸನ್ ಅದ್ನಾನ್ ಅನ್ಸಾರಿ ಕುದ್ಲೂರು, ಕುರುನ್ನುಗಳ್ ಮಾಸಿಕ ಸಂಚಾಲಕರಾಗಿ ಸಿನಾನ್ ರಹ್ಮಾನಿ ಕುದ್ಲೂರು, ರಿಲೀಫ್ ಸೆಲ್ ಚೇರ್ಮೆನ್ ಆಗಿ ಉಸ್ಮಾನ್ ದಾರಿಮಿ ಹಳೆಗೇಟು,ಕನ್ವೀನರಾಗಿ ಹನೀಫ್ ದಾರಿಮಿ ಕೋಲ್ಪೆ, ಮೀಡಿಯಾ ವಿಂಗ್ ಚೇರ್ಮೆನ್ ಆಗಿ ಸವಾದ್ ನಿಝಾಮಿ ಕುದ್ರಡ್ಕ, ಕನ್ವೀನರಾಗಿ ಬದ್ರುದ್ದೀನ್ ಮುಸ್ಲಿಯಾರ್ ಅಡೆಕ್ಕಲ್ ಇವರುಗಳನ್ನು ಆಯ್ಕೆಮಾಡಲಾಯಿತು.
ಕಾರ್ಯಕ್ರಮದಲ್ಲಿ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಹಾಜಿ ಕೊಲ್ಲೆಜಾಲ್, ಉಪಾಧ್ಯಕ್ಷರಾದ ಅಬ್ದುಲ್ ಹಕೀಂ ಬಂಗೇರಕಟ್ಟೆ, ಕಾರ್ಯದರ್ಶಿ ಯೂಸುಫ್ ಹಾಜಿ ಪೆದಮಲೆ, ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಸದಸ್ಯರಾದ ಹಮೀದ್ ಕರಾವಳಿ, ಮುಹಮ್ಮದ್ ಕೂಟೋಲು, SKSSF ಉಪ್ಪಿನಂಗಡಿ ವಲಯ ಕಾರ್ಯದರ್ಶಿ ಇಸ್ಮಾಯಿಲ್ ತಂಙಳ್, ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಕಾರ್ಯದರ್ಶಿ ಅಬ್ದುಲ್ ಶುಕೂರ್ ಹಾಜಿ, ಹಾಗೂ ಹಲವು ಮದ್ರಸಗಳ ಮ್ಯಾನೇಜ್ಮೆಂಟ್ ಪ್ರತಿನಿಧಿಗಳು, ರೇಂಜ್ ವ್ಯಾಪ್ತಿಯ ಎಲ್ಲಾ ಮದ್ರಸಗಳ ಸದರ್ ಉಸ್ತಾದರುಗಳು ಹಾಗೂ ಮುಅಲ್ಲಿಂ ಉಸ್ತಾದರುಗಳು ಭಾಗವಹಿಸಿದ್ದರು.







