ಉರ್ವ : ಸರಕಾರಿ ಶಾಲೆಯಲ್ಲಿ ಸಾವಿತ್ರಿ ಬಾಯಿ ಫುಲೆ ಜನ್ಮ ದಿನ ಪ್ರಯುಕ್ತ ಮಾಹಿತಿ ತರಬೇತಿ

ಮಂಗಳೂರು : ನಗರದ ಗಾಂಧಿನಗರ ಉರ್ವ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಸಾಮರಸ್ಯ ಮಂಗಳೂರು ನೇತೃತ್ವದಲ್ಲಿ ಸಾವಿತ್ರಿ ಬಾಯಿ ಫುಲೆಯವರ ಜನ್ಮ ದಿನ ಪ್ರಯುಕ್ತ ಮಾಹಿತಿ ತರಬೇತಿ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್ ಹಾಗೂ ದಲಿತ ಪರ ಚಳುವಳಿಯ ಮುಖಂಡರಾದ ಮೋಹನಂಗಯ್ಯ ಸ್ವಾಮಿಯವರು ಸಾವಿತ್ರಿಬಾಯಿ ಫುಲೆರವರ ಕುರಿತು ಮಾಹಿತಿ ನೀಡಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಫ್ಲೇವಿ ಫೆರ್ನಾಂಡಿಸ್ ಅವರನ್ನು ಸಾವಿತ್ರಿಬಾಯಿ ಫುಲೆ ಜನ್ಮ ದಿನ ಪ್ರಯುಕ್ತ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ಸಮರ್ಥ ಭಟ್, ನ್ಯೂ ಫ್ರೆಂಡ್ಸ್ ಕಾಪಿಗುಡ್ಡೆ ಸ್ಥಾಪಕ ಅಧ್ಯಕ್ಷರಾದ ರಾಜೇಶ್ ದೇವಾಡಿಗ, ಸಾಮರಸ್ಯ ಮಂಗಳೂರು ಪದಾಧಿಕಾರಿಗಳಾದ , ಟಿಸಿ ಗಣೇಶ್ , ಯೋಗೀಶ್ ನಾಯಕ್, ಶ್ರೀಮತಿ ಪೂರ್ಣಿಮಾ , ನಾಗೇಂದ್ರ ರಾವ್ , ವಿದ್ಯಾ ಶೆಣೈ, ಶಾಲೆಯ ಮುಖ್ಯೋಪಾಧ್ಯಾಯಿನಿ ಫ್ಲೆವಿ ಫೆರ್ನಾಂಡಿಸ್, ಶಿಕ್ಷಕಾದ ಶರ್ಮಿಳಾ ಡಿಸೋಜ, ಜ್ಯೋತಿ ನಾಯಕ್ , ರಾಜೇಶ್ವರಿ ಪ್ರಭು , ನಮಿತಾ ಬಿ , ಆಶಾ ,ಸುಧಾ ಬಿ , ಜೆಸಿಂತಾ ಲಾಬಿ , ಗೌರವ ಶಿಕ್ಷಕರಾದ ಶೋಬಾ , ಬೇಬಿ ಶಕುಂತಲಾ ಮತ್ತಿತರು ಉಪಸ್ಥಿತರಿದ್ದರು.
ನೀತ್ ಶರಣ್ ಕಾರ್ಯಕ್ರಮ ನಿರೂಪಿಸಿದರು. ಉಮ್ಮರ್ ಸಾಲೆತ್ತೂರು ಧನ್ಯವಾದ ಗೈದರು .







