ಯು.ಟಿ. ಖಾದರ್ ಮತ್ತು ಯುಟಿ. ಇಫ್ತಿಕಾರ್ ಗೆ ಸನ್ಮಾನ

ಉಳ್ಳಾಲ: ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವ ವಿಧಾನಸಭಾಧ್ಯಕ್ಷ ಮತ್ತು ಉಳ್ಳಾಲದ ಶಾಸಕ ಯು.ಟಿ. ಖಾದರ್ ಹಾಗೂ ಅವರ ಸಹೋದರ ಡಾ. ಇಫ್ತಿಕಾರ್ ಅಲಿ ಯವರು ಉಳ್ಳಾಲ ಮೇಲಂಗಡಿಯ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿ(ಹೊಸಹಳ್ಳಿ)ಗೆ ಭೇಟಿ ನೀಡಿದರು
ಈ ಸಂದರ್ಭದಲ್ಲಿ ಮೇಲಂಗಡಿ ಮೊಹಲ್ಲಾದ ಪರವಾಗಿ ಸ್ಪೀಕರ್ ಯುಟಿ ಖಾದರ್ ಮತ್ತು ಯುಟಿ ಇಫ್ತಿಕಾರ್ ಅವರಿಗೆ ಹೊಸ ಪಳ್ಳಿಯ ಖತೀಬ್ ಮೌಲಾನ ಅನಸ್ ಅಝ್ಹರಿ ಪೊಯತ್ತ ಬೈಲ್, ಅಧ್ಯಕ್ಷ ಮುಸ್ತಫಾ ಅಬ್ದುಲ್ಲ, ಮಾಜಿ ಅಧ್ಯಕ್ಷ ಫಾರೂಕ್ ಉಳ್ಳಾಲ್ , ಉಪಾಧ್ಯಕ್ಷ ಅಬ್ದುಲ್ ರಹಿಮಾನ್ , ರಶೀದ್ ಮೊಹಮ್ಮದ್ ಮತ್ತಿತರರು ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.
ನಝೀರ್ ಬಾರ್ಲಿ, ಮಾಲಿಕ್ ಹಮೀದ್, ಆಸಿಫ್ ಅಬ್ದುಲ್ಲ, ಸವ್ವಾದ್ ಅಬ್ದುಲ್ಲಾ, ಮುಹಿಯ್ಯುದ್ದೀನ್ ಸ್ಮಾರ್ಟ್ ಮತ್ತಿತರರು ಉಪಸ್ಥಿತರಿದ್ದರು.
Next Story