ವಿಟ್ಲ: ಮರಳು ತೆಗೆಯುತ್ತಿದ್ದ ಕೋಡಿ ಹೊಳೆಗೆ ಪೊಲೀಸ್ ದಾಳಿ; ಸೊತ್ತು ವಶಕ್ಕೆ

ವಿಟ್ಲ: ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಕೋಡಿ ಹೊಳೆಯಲ್ಲಿ ಡ್ರೆಜ್ಜಿಂಗ್ ಯಂತ್ರ ಬಳಸಿ ಮರಳು ತೆಗೆಯುತ್ತಿದ್ದಲ್ಲಿಗೆ ವಿಟ್ಲ ಪೊಲೀಸ್ ದಾಳಿ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮರಳು ತೆಗೆಯುತ್ತಿದ್ದರೂ, ಸಾಲೆತ್ತೂರು ಗ್ರಾಮ ಪಂಚಾಯಿಗೆ ಮೌನ ವಹಿಸಿತ್ತು. ಈ ಬಗ್ಗೆ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ವಿಟ್ಲ ಉಪನಿರೀಕ್ಷಕ ರತ್ನ ಕುಮಾರ್ ನೇತೃತ್ವದ ಪೊಲೀಸ್ ತಂಡ ದಾಳಿಯನ್ನು ನಡೆಸಿದೆ.
ಈ ಸಂದರ್ಭ ನದಿಯ ಬದಿಯಲ್ಲಿ ತೆಗೆದು ಹಾಕಿದ ಮರಳಿನ ರಾಶಿ ಹಾಗೂ ಮರಳು ತೆಗೆಯಲು ಬಳಸಿದ ಯಂತ್ರವನ್ನು ವಶಕ್ಕೆ ಪಡೆದುಕೊಂಡು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





