ವಿಟ್ಲ | ಸಂಯುಕ್ತ ಜಮಾಅತ್ ಕಮಿಟಿ ವತಿಯಿಂದ ಉಮೀದ್ ವಕ್ಫ್ ಮಾಹಿತಿ ಕಾರ್ಯಾಗಾರ

ವಿಟ್ಲ: ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ವತಿಯಿಂದ ಉಮೀದ್ ವಕ್ಫ್ ಮಾಹಿತಿ ಕಾರ್ಯಾಗಾರ ವಿಟ್ಲದ ಬ್ರೈಟ್ ಆಡಿಟೋರಿಯಂ ನಲ್ಲಿ ಮಂಗಳವಾರ ನಡೆಯಿತು.
ಮಲಾರ್ ಅರಸ್ತಾನ ಜುಮಾ ಮಸೀದಿ ಖತೀಬ್ ಶಫೀಕ್ ಕೌಸರಿ ಅವರು ದುವಾಃ ಮೂಲಕ ಚಾಲನೆ ನೀಡಿದರು.
ಸಂಯುಕ್ತ ಜಮಾಅತ್ ಕಮಿಟಿ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಯುಕ್ತ ಜಮಾಅತ್ ಮತ್ತು ವಕ್ಫ್ ಗೆ ಅವಿನಾಭಾವ ಸಂಬಂಧವಿದ್ದು, ಅವರ ಸೂಚನೆಯಂತೆ ಸರಕಾರದ ವಿವಿಧ ಯೋಜನೆಗಳನ್ನು ಮುಸ್ಲಿಂ ಸಮುದಾಯಕ್ಕೆ ತಲುಪಿಸುವ ಕಾರ್ಯ ನಮ್ಮ ಸಂಸ್ಥೆ ಮಾಡಿಕೊಂಡು ಬರುತ್ತಿದೆ. ಅದರಂತೆ ಉಮೀದ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರಕಾರದ ಯೋಜನೆ ಇದಾಗಿದ್ದು, ಎಲ್ಲರೂ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಉಪಾಧ್ಯಕ್ಷ ಎಂ ಎಸ್ ಮಹಮ್ಮದ್, ಕಾರ್ಯದರ್ಶಿ ಅಬೂಬಕ್ಕರ್ ನೋಟರಿ, ಸದಸ್ಯರಾದ ಕೆ.ಎಸ್ ಮುಹಮ್ಮದ್, ಬಿ.ಎ ಮುಹಮ್ಮದ್ ಬಂಟ್ವಾಳ, ಆಶಿಕ್ ಕುಕ್ಕಾಜೆ, ಲತೀಫ್ ನೇರಳಕಟ್ಟೆ, ಬ್ರೈಟ್ ಆಡಿಟೋರಿಯಂ ನ ಆರ್.ಕೆ ಅಬ್ದುಲ್ಲ ಹಾಜಿ, ವಕ್ಫ್ ಇಲಾಖೆಯ ಮುಸ್ತಾಫ ಮೊದಲಾದವರು ಉಪಸ್ಥಿತರಿದ್ದರು.
ಶಫೀಕ್ ಕೌಶರಿ, ಬಿಸಿ ಒನ್ ನ ಶಾಫಿ ಸಜಿಪ, ಮುಸ್ತಾಫ, ವಿಟ್ಲ ಮೀಡಿಯಾ ಸೆಂಟರ್ ನ ಮುಹಮ್ಮದ್ ಅಲಿ ವಿಟ್ಲ ಅವರು ಕಾರ್ಯಾಗಾರ ನಡೆಸಿಕೊಟ್ಟರು.
ಸದಸ್ಯ ರಶೀದ್ ವಿಟ್ಲ ಅವರು ಸ್ವಾಗತಿಸಿ, ನಿರೂಪಿಸಿದರು.







