ಫೆ.25 ರಂದು ವಿ.ಟಿ. ರಾಜಶೇಖರ್, ಪಿ.ಬಿ. ಡೇಸಾ ಹಾಗೂ ಪ್ರೊ. ಮುಝಫರ್ ಅಸ್ಸಾದಿ ನುಡಿ ನಮನ ಕಾರ್ಯಕ್ರಮ

ಮಂಗಳೂರು: ಪತ್ರಕರ್ತ ವಿ.ಟಿ. ರಾಜಶೇಖರ್ ಶೆಟ್ಟಿ, ಪಿ.ಯು.ಸಿ.ಎಲ್ ನೇತಾರ ಪಿ.ಬಿ. ಡೇಸಾ ಹಾಗೂ ಹಿರಿಯ ಚಿಂತಕ ಪ್ರೊ. ಮುಝಫರ್ ಅಸ್ಸಾದಿ ಅವರಿಗೆ ವಿವಿಧ ಸಂಘಟನೆಗಳ ವತಿಯಿಂದ ಫೆ.25 ರಂದು ನುಡಿನಮನ ಕಾರ್ಯಕ್ರಮ ಹಂಪನಕಟ್ಟೆ ಹೊಟೇಲ್ ಶ್ರೀನಿವಾಸ್ ಸಭಾಂಗಣದಲ್ಲಿ ನಡೆಯಲಿದೆ.
ಕರಾವಳಿಯ ಈ ಪ್ರತಿಭೆಗಳು ತಮ್ಮ ಜೀವನವನ್ನೇ ದಮನಿತರ ಅಭಿವೃದ್ಧಿ ಮತ್ತು ರಕ್ಷಣೆಗೆ ಮೀಸಲಿಟ್ಟು, ಶೋಷಣೆಗೊಳಪಟ್ಟ ಜನರು ಸೆಟೆದು ನಿಂತು ಗೌರವದ ಬದುಕು ಸಾಗಿಸಲು ಹಗಲಿರುಳು ದುಡಿದಿದ್ದಾರೆ ಮತ್ತು ಯುವ ಜನಾಂಗಕ್ಕೆ ಮಾರ್ಗದರ್ಶಕರಾಗಿದ್ದಾರೆ.
ಈ ಧೀಮಂತ ವ್ಯಕ್ತಿಗಳ ಒಡನಾಡಿಗಳು ಹಾಗೂ ಅವರ ಬದುಕಿನ ಬಗ್ಗೆ ಅರಿತುಕೊಳ್ಳಲಿಚ್ಚಿಸುವ ಸರ್ವ ಬಂಧುಗಳು ಈ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಂಘಟಕರು ಕೋರಿದ್ದಾರೆ.
Next Story