VTU ಸೆನೆಟ್ ಸದಸ್ಯರಾಗಿ ಡಾ.ಮುಸ್ತಫಾ ಬಸ್ತಿಕೋಡಿ ನೇಮಕ: ಗೆಳೆಯರ ಬಳಗದಿಂದ ಸನ್ಮಾನ

ಮಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) 9ನೇ ಅಕಾಡೆಮಿಕ್ ಸೆನೆಟ್ ಸದಸ್ಯರಾಗಿ ನೇಮಕಗೊಂಡ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ, ಡಾ.ಮುಸ್ತಫಾ ಬಸ್ತಿಕೋಡಿ ಅವರನ್ನು, ಅವರ ಆತ್ಮೀಯ ಗೆಳೆಯರ ಬಳಗ ಮನೆಗೆ ಭೇಟಿ ನೀಡಿ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು.
ಗೆಳೆಯರ ಬಳಗದಲ್ಲಿ ಶೇಖ್ ಮೊಯಿದೀನ್, ಸಫ್ವಾನ್ ಕರ್ವೇಲ್, ಶಮೀಝ್, ಝಮೀಲ್ ಕಾಸರಗೋಡು, ಜಲಾಲ್ ಕಾಸರಗೋಡು ಹಾಗೂ ನಿಸಾರ್ ಮಲಾರ್ ಉಪಸ್ಥಿತರಿದ್ದರು.
Next Story





