ಸುರತ್ಕಲ್: 'ವಫಾ ಗೋಲ್ಡ್ ಆಂಡ್ ಡೈಮಂಡ್ಸ್'ನ ನೂತನ ಮಳಿಗೆ ಶುಭಾರಂಭ

ಸುರತ್ಕಲ್: ಪೀಠೋಪಕರಣಗಳು ಮತ್ತು ವಾಣಿಜ್ಯ-ವಸತಿ ಸಮುಚ್ಚಯಗಳ ನಿರ್ಮಾಣದಲ್ಲಿ ಅಂತರ್ ರಾಜ್ಯಮಟ್ಟದಲ್ಲಿ ಹೆಸರುವಾಸಿಯಾಗಿರುವ ವಫಾ ಎಂಟರ್ ಪೈಸಸ್‌ನ ನೂತನ ಉದ್ದಿಮೆ 'ವಫಾ ಗೋಲ್ಡ್ ಆಂಡ್ ಡೈಮಂಡ್ಸ್'ನ ನೂತನ ಮಳಿಗೆಯು ಶುಕ್ರವಾರ ಕೃಷ್ಣಾಪುರದಲ್ಲಿನ ಎಚ್‌ಎನ್‌ಜಿಸಿ ಕಟ್ಟಡದಲ್ಲಿ ಶುಭಾರಂಭಗೊಂಡಿತು.
ನೂತನ ಮಳಿಗೆಯನ್ನು ಸಂಸ್ಥೆಯ ಮಾಲಕರಾದ ವಹ್ಹಾಬ್ ಕುಳಾಯಿ ಅವರ ತಾಯಿ ಮೈಮೂನ ಅವರು ಉದ್ಘಾಟಿಸಿದರು. ಕೃಷ್ಣಾಪುರ ಸಂಯುಕ್ತ ಖಾಝಿ ಇ.ಕೆ. ಇಬ್ರಾಹೀಂ ಮದನಿ ದುವಾ ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಚಲನಚಿತ್ರ ನಟ ಅರವಿಂದ ಬೋಳಾರ್ ಅವರು, "ನಾನು ವಫಾ ಕುಟುಂಬದಲ್ಲಿ ಒಬ್ಬ ಎಂಬ ಹೆಮ್ಮೆ ಇದೆ. ವ್ಯವಹಾರ ಅನ್ಯೋನ್ಯತೆ ನಂಬಿಕೆಯಿದ್ದಲ್ಲಿ ಮಾತ್ರ ಸಾಧ್ಯ. ವಫಾ ಸಂಸ್ಥೆ ನಂಬಿಕೆಯ ಮೇಲೆ ವ್ಯವಹಾರ ನಡೆಸುತ್ತಿದ್ದು, ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದೆ" ಎಂದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿ ಸ್ಟಾರ್ ಮಾತನಾಡಿ, ಕೃಷ್ಣಾಪುರ ಸರ್ವ ಧರ್ಮಿಯರ ಸೌಹಾರ್ದದ ಊರು. ವಫಾ ತನ್ನ ಎಲ್ಲಾ ಉದ್ಯಮಗಳಲ್ಲೂ ಗುಣಮಟ್ಟ ಮತ್ತು ಬದ್ಧತೆಯನ್ನು ಕಾಪಾಡಿಕೊಂಡು ಬಂದಿರುವ ಸಂಸ್ಥೆ. ಗ್ರಾಹಕರ ನಂಬಿಕೆಗೆ ವಫಾ ಗೋಲ್ಡ್ ಆ್ಯಂಡ್ ಡೈಮಂಡ್ ಕೂಡಾ ಗ್ರಾಹಕರ ನಂಬಿಕೆಗೆ ಯಾವುದೇ ರೀತಿಯಲ್ಲೂ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಮೇಯರ್ ಅಶ್ರಪ್ ಕೆ. ಅವರು ಮಾತನಾಡಿ, ವಫಾ ಸಂಸ್ಥೆ ತನ್ನ ಉದ್ಯಮಗಳ ಜೊತೆಗೆ ತನ್ನ ಲಾಭಾಂಶದ ಇಂತಿಷ್ಟು ಭಾಗವನ್ನು ಬಡವರು, ಬಡ ಹೆಣ್ಣುಮಕ್ಕಳ ಮದುವೆ, ಆರೋಗ್ಯ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಇಂತಹಾ ಸಮಾಜ ಸೇವೆ ಮಾಡುವ ಸಂಸ್ಥೆಯನ್ನು ಎಲ್ಲರೂ ಬೆಂಬಲಿಸಬೇಕು. ಆಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಎಲ್ಲರೂ ಶ್ರಮಿಸಬೇಕೆಂದು ನುಡಿದರು.
ಉದ್ಯಮಿ ರಜಬ್ ಪರ್ಕಳ ಮಾತನಾಡಿ, ತಾಯಿ ಉದ್ಘಾಟಿಸಿದ ಯಾವುದೇ ಕಾರ್ಯಗಳು ದೇವರಕೃಪೆಯಿಂದ ಉತ್ತರೋತ್ತರ ಅಭಿವೃದ್ಧಿಯನ್ನೇ ಕಾಣುತ್ತವೆ. ಬಡವರಿಗೆ ಉಪಕಾರಿಯಾಗಿ ಕಾರ್ಯಾಚರಿಸುತ್ತಿರುವ ವಫಾ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆದು ಆ ಮೂಲಕ ಇನ್ನಷ್ಟು ಸಮಾಜಮುಖಿ ಕೆಲಸಗಳು ನಡೆಯಲಿ ಎಂದು ಅವರು ಶುಭಹಾರೈಸಿದರು.
ಇದೇ ಸಂದರ್ಭ ವಫಾ ಗೋಲ್ಡ್ ಆಂಡ್ ಡೈಮಂಡ್ಸ್'ನ ನೂತನ ಲಕ್ಕಿ ಸ್ಕೀಮ್ ನ ಬ್ರೋಚರ್ ನ್ನು ಅತಿಥಿಗಳು ಲೋಕಾರ್ಪಣೆಗೊಳಿಸಿದರು. ಉದ್ಘಾಟನೆಯ ದಿನದಂದು ಸಭಿಕರಿಗಾಗಿ ಆಯೋಜಿಸಿದ್ದ "ವಿಸಿಟ್ ಆ್ಯಂಡ್ ವಿನ್" ಸ್ಪರ್ಧೆಯಲ್ಲಿ ವಿಜೇತರಾದ ಇಬ್ಬರಿಗೆ ಚಿನ್ನದ ಉಂಗುರದ ಬಹುಮಾನ ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್, ಇನಾಯತ್ ಅಲಿ, ರೋಟರಿ ಕ್ಲಬ್ ಅಧ್ಯಕ್ಷೆ ತಸ್ಲಿಯಾ ಅರಾ, ವಫಾ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಾಲಕ ಅಬ್ದುಲ್ ವಹ್ಹಾಬ್ ಕುಳಾಯಿ, ಅವರ ಪುತ್ರಿ ವಫಾ, ಮ್ಯಾನೇಜರ್ ಅಬ್ದುಲ್ ಖಾದರ್, ಮಾಧ್ಯಮ ವಕ್ತಾರ ಜುನೈದ್ ಮೊದಲಾದವರು ಉಪಸ್ಥಿತರಿದ್ದರು.







