ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಇತ್ಯರ್ಥ ಆಗದಿದ್ದಲ್ಲಿ ಹೋರಾಟ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ

ಉಳ್ಳಾಲ: ಮಂಗಳೂರಿನಿಂದ ಕೇರಳ ಸಂಪರ್ಕ ಕಲ್ಪಿಸುವ ರಾ.ಹೆ.ಅವೈಜ್ಞಾನಿಕವಾಗಿದ್ದು, ಈ ಕಾರಣದಿಂದ ಕೆಲವು ಅಪಘಾತಗಳು ಸಂಭವಿಸಿ ಜೀವ ಹಾನಿ ಆಗುತ್ತಿದೆ.ಉಳ್ಳಾಲಕ್ಕೆ ತೆರಳುವ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ , ಇದಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಕಾರಣ. ಅವರ ಬೇಜವಾಬ್ದಾರಿ ಧೋರಣೆಯಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆ ರಸ್ತೆ ಯನ್ನು ಈ ರೀತಿ ಮಾಡಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕೋಶಾಧಿಕಾರಿ ಸಲಾಂ ಸಿಎಚ್ ಆರೋಪಿಸಿದರು.
ಅವರು ಉಳ್ಲಾಲ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಎಂದರೆ ಅದರಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಇರಬೇಕು. ಯಾರು ಕೂಡ ರಸ್ತೆ ದಾಟಿ ಹೋಗಬಾರದು.ರಸ್ತೆ ದಾಟಲು ಅಂಡರ್ ಪಾಸ್ ವ್ಯವಸ್ಥೆ ಮಾಡಬೇಕು. ರಸ್ತೆ ಬದಿಯಲ್ಲಿ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಕೊಠಡಿ ಇರಬೇಕು. ಬಸ್ ಸಂಚಾರಕ್ಕೆ ಸರ್ವಿಸ್ ರಸ್ತೆ ಪ್ರತ್ಯೇಕ ಇರಬೇಕು. ಇವ್ಯಾವ ವ್ಯವಸ್ಥೆ ಮಾಡದೇ ಸರ್ಕಾರ ಯಾವ ಮಾನದಂಡದ ಮೇಲೆ ಟೋಲ್ ಸಂಗ್ರಹ ಮಾಡುತ್ತದೆ. ಇದು ನ್ಯಾಯ ಕ್ಕೆ ವಿರುದ್ಧ ಅಲ್ಲವೇ ಎಂದು ಪ್ರಶ್ನಿಸಿದ ಅವರು ಈ ಸಮಸ್ಯೆ ಇತ್ಯರ್ಥ ಆಗದಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ರಾಷ್ಟ್ರೀಯ ಹೆದ್ದಾರಿ, ಸರ್ವಿಸ್ ಒಂದೇ ಆಗಿದೆ.ಸಟಿ ಬಸ್ ಹೋಗುವುದು ಇದೇ ರಸ್ತೆಯಲ್ಲಿ. ಅವರು ಗಂಟೆ ಗಟ್ಟಲೆ ಒಂದೆಡೆ ಪ್ರಯಾಣಿಕರಿಗಾಗಿ ನಿಲ್ಲಿಸುತ್ತಾರೆ. ಇದರಿಂದ ಉಳಿದ ವಾಹನಗಳಿಗೆ ಸಂಚರಿಸಲು ತೊಂದರೆ ಆಗುತ್ತದೆ. ಈ ಕಾರಣದಿಂದ ಟ್ರಾಫಿಕ್ ಜಾಮ್ ಆಗಾಗ ಇಲ್ಲಿ ಆಗುತ್ತಾ ಇರುತ್ತದೆ. ನೇತ್ರಾವತಿ ಸೇತುವೆ ಬಳಿ ಸರಣಿ ಅಪಘಾತ ನಡೆಯಲು, ಇದಕ್ಕಿಂತ ಮೊದಲು ಆದ ಅಪಘಾತ ದಲ್ಲಿ ಜೀವ ಹಾನಿ ಆಗಲು ಮುಂಭಾಗದಲ್ಲಿ ಸಂಚರಿಸುವ ವಾಹನಗಳು ದಿಡೀರ್ ಸಂಚಾರ ನಿಲ್ಲಿಸಿದ್ದೇ ಕಾರಣ. ರಾಷ್ಟ್ರೀಯ ಹೆದ್ದಾರಿ ಯಲ್ಲಿ ವಾಹನಗಳು ಕೆಟ್ಟು ನಿಲ್ಲಬಾರದು. ಸಂಚಾರದ ಮಧ್ಯೆ ನಿಲ್ಲಿಸಬಾರದು ಎಂಬ ನಿಯಮ ಇದೆ. ಅದಿಲ್ಲಿ ಪಾಲನೆ ಆಗುತ್ತಿಲ್ಲ ಎಂದು ಆರೋಪಿಸಿದರು.
ಪಂಪ್ ವೆಲ್ ನಿಂದ ತಲಪಾಡಿ ವರೆಗೆ ಸರ್ವಿಸ್ ರಸ್ತೆ ಆಗಬೇಕು.ಸಿಟಿ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡಬೇಕು.ಘನ ವಾಹನಗಳಿಗೆ ತಾಂತ್ರಿಕ ದೋಷ ಕಂಡಲ್ಲಿ ನಿಲುಗಡೆ ಮಾಡಲು ವ್ಯವಸ್ಥೆ ಮಾಡಬೇಕು.ಊರಿನ ನಾಮಫಲಕ ಅಳವಡಿಸುವುದು, ಫುಟ್ ಪಾತ್, ಒಳಚರಂಡಿ, ದಾರಿದೀಪ, ವ್ಯವಸ್ಥೆ ಮಾಡುವ ಮೂಲಕ ಟೋಲ್ ಗೇಟ್ ಶುಲ್ಕ ರದ್ದು ಪಡಿಸಬೇಕು ಎಂದು ಒತ್ತಾಯಿಸಿದ ಅವರು ಈ ಬಗ್ಗೆ ಈಗಾಗಲೇ ಎನ್ ಎಚ್ ಎಐ, ಜಿಲ್ಲಾಧಿಕಾರಿ, ಶಾಸಕ ರಿಗೆ, ಪ್ರಾಧಿಕಾರ ಇಲಾಖೆ ಸಹಿತ ವಿವಿಧ ಇಲಾಖೆಗಳ ಕಚೇರಿಗೆ ಮನವಿ ಅರ್ಪಿಸಲಾಗಿದೆ. ಈ ಬೇಡಿಕೆ ಈಡೇರಿಕೆ ಆಗದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಉಳ್ಳಾಲ ನಗರ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಸಯಾಫ್, ಕೋಶಾಧಿಕಾರಿ ಹುಸೈನ್ ತೊಕ್ಕೊಟ್ಟು, ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಸೈಫ್, ಸದಸ್ಯ ಅಶ್ರಫ್ ಅಝೀಝ್ ಅಲೇಕಳ ಉಪಸ್ಥಿತರಿದ್ದರು







