ವಿಮೆನ್ ಇಂಡಿಯಾ ಮೂವ್ಮೆಂಟ್ ಸಂಸ್ಥಾಪನಾ ದಿನ : ಬಜ್ಪೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ

ಮಂಗಳೂರು : ವಿಮೆನ್ ಇಂಡಿಯಾ ಮೂವ್ಮೆಂಟ್ ಸಂಸ್ಥಾಪನಾ ದಿನದ ಅಂಗವಾಗಿ ವಿಮ್ ಮಂಗಳೂರು ನಗರ ಜಿಲ್ಲೆ ಬಜ್ಪೆ ಬ್ರಾಂಚ್ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವು ಬಜ್ಪೆಯಲ್ಲಿ ನಡೆಯಿತು.
ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಅವರು ಧ್ವಜಾರೋಹಣ ನೆರವೇರಿಸಿ, ವಿಮೆನ್ ಇಂಡಿಯಾ ಮೂವ್ಮೆಂಟ್ ನಡೆದು ಬಂದ ಹೋರಾಟ, ಧೈರ್ಯ ಮತ್ತು ಸಮರ್ಪಣೆಯ ಹಾದಿಯನ್ನು ಸ್ಮರಿಸಿದರು.
ಜಾತಿ–ಮತಗಳ ಗಡಿಗಳನ್ನು ಮರೆತು, ಮಾನವೀಯತೆ ಮತ್ತು ಸಮಾನತೆಯ ಅಡಿಯಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಶಕ್ತಿಯಾಗಿ ಚಳುವಳಿಯೊಂದಿಗೆ ಕೈಜೋಡಿಸುವಂತೆ ಕರೆ ನೀಡಿದರು.
ಈ ವೇಳೆ ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ SDPI ಬೆಂಬಲಿತ ಜನಪ್ರತಿನಿಧಿಗಳಾಗಿ ಆಯ್ಕೆಯಾದ ಆಯಿಷಾ ಬಜ್ಪೆ, ವೀಣಾ ಡಿ’ಸೋಜಾ ಹಾಗೂ ಗುಲ್ಶನ್ ಕರೀಂ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಅನೇಕ ಮಹಿಳೆಯರು ವಿಮ್ ಸದಸ್ಯತ್ವವನ್ನು ಸ್ವೀಕರಿಸಿದರು.
ಕಾರ್ಯಕ್ರಮಕ್ಕೆ ವಿಮ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಝುಲೈಖ ಬಜ್ಪೆ, ವಿಧಾನಸಭಾ ಕ್ಷೇತ್ರ ಅಧ್ಯಕ್ಷೆ ಫೌಝಿಯಾ, ಕಾರ್ಯದರ್ಶಿ ಝೀನತ್, ಬ್ರಾಂಚ್ ಅಧ್ಯಕ್ಷೆ ಸಾರಿಕಾ ಹಾಗೂ ಕಾರ್ಯದರ್ಶಿ ರಮ್ಲತ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿಮ್ ಸದಸ್ಯೆ ನಾಗವೇಣಿ ಸ್ವಾಗತಿಸಿ, ಸಾಮಿಯಾರವರು ಧನ್ಯವಾದಗೈದರು.







