ಜ.31ರಿಂದ ವಿಶ್ವ ಕೊಂಕಣಿ ನಾಟಕ ಮಹೋತ್ಸವ

ಸಾಂದರ್ಭಿಕ ಚಿತ್ರ
ಮಂಗಳೂರು, ಜ.29: ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಡಾ ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ ಮತ್ತು ಅನುವಾದ ಪ್ರಶಸ್ತಿ ಪದಾನ ಕಾರ್ಯಕ್ರಮ ನಗರದ ಟಿವಿ ರಮಣ ಪೈ ಸಭಾಂಗಣದಲ್ಲಿ ಜ.31 ಮತ್ತು ಫೆ.1ರಂದು ನಡೆಯಲಿದೆ.
ಜ.31ರಂದು ಸಂಜೆ 5ಕ್ಕೆ ಮಂಗಳೂರು ಸಾಧನಾ ಬಳಗ ಶ್ರಿ ಪ್ರಕಾಶ ಶೆಣೈ ನೇತೃತ್ವದ ಮಕ್ಕಳ ಕಲಾತಂಡದವರು ಭಕ್ತ ಪುರಂದರ ಯೆಂಬ ಕೊಂಕಣಿ ನಾಟಕವನ್ನು ಪ್ರದರ್ಶಿಸಲಿದ್ದಾರೆ. ಅಂದು ಸಂಜೆ 7ಕ್ಕೆ ಮಂಗಳೂರಿನ ರಂಗ ಅಧ್ಯಯನ ಕೇಂದ್ರ ತಂಡದವರು ಜನಪ್ರಿಯ ಚಿಕೆ ರಾಬ್ (ಹ್ಯಾಂಗ್ ಓನ್) ಕೊಂಕಣಿ ನಾಟಕ ಪ್ರದರ್ಶಿಸಲಿದ್ದಾರೆ. ಫೆ.1ರಂದು ಸಂಜೆ 5ಕ್ಕೆ ಗೋವಾದ ನಟರಂಗ ಕ್ರಿಯೇಶನ್ಸ್ ತಂಡದಿಂದ ಹೆಡೋನಿಸ್ಟ್ ಕೊಂಕಣಿ ನಾಟಕವು ಪ್ರದರ್ಶನಗೊಳ್ಳಲಿದೆ. ಅಂದು ಸಂಜೆ 7ಕ್ಕೆ ನಾಟ್ಯ ನಿಕೇತನ ಕೊಲ್ಯದ ವತಿಯಿಂದ ಕರ್ನಾಟಕ ಕಲಾಶ್ರೀ ಗುರು ರಾಜಶ್ರೀ ಉಳ್ಳಾಲ ತಂಡದಿಂದ ಪಾರಿಜಾತ ಫೂಲ್ ಗೀತ ನೃತ್ಯ ನಾಟಕ ಪ್ರದರ್ಶನಗೊಳ್ಳಲಿದೆ.
ಫೆ.1ರಂದು ಸಂಜೆ 6ಕ್ಕೆ ಹಿರಿಯ ಕೊಂಕಣಿ ರಂಗಕರ್ಮಿ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾರಿ ಮತ್ತು ಹಿರಿಯ ಕೊಂಕಣಿ ಅನುವಾದಕಿ ಮಾಯಾ ಅನಿಲ್ ಖರಂಗಟೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.





