Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ವೇಗದ ಬದಲಾವಣೆಯೊಂದಿಗೆ ಜಾಗತಿಕ ಸವಾಲುಗಳು...

ವೇಗದ ಬದಲಾವಣೆಯೊಂದಿಗೆ ಜಾಗತಿಕ ಸವಾಲುಗಳು ಹೆಚ್ಚುತ್ತಿವೆ: ಯೆನಪೋಯ ವಿವಿ 14 ನೇ ಘಟಿಕೋತ್ಸವದಲ್ಲಿ ಅಮಿತಾಬ್ ಕಾಂತ್

ವಾರ್ತಾಭಾರತಿವಾರ್ತಾಭಾರತಿ19 Oct 2024 6:12 PM IST
share
ವೇಗದ ಬದಲಾವಣೆಯೊಂದಿಗೆ ಜಾಗತಿಕ ಸವಾಲುಗಳು ಹೆಚ್ಚುತ್ತಿವೆ: ಯೆನಪೋಯ ವಿವಿ 14 ನೇ ಘಟಿಕೋತ್ಸವದಲ್ಲಿ ಅಮಿತಾಬ್ ಕಾಂತ್

ಕೊಣಾಜೆ: ಇತ್ತೀಚಿನ ಕಾಲಘಟ್ಟದಲ್ಲಿ ಆಧುನಿಕತೆ, ತಾಂತ್ರಿಕ ಬೆಳವಣಿಗೆಗಳ ಪರಿಣಾಮ ಜಗತ್ತು ವೇಗವಾಗಿ ಬದಲಾಗುತ್ತಿದೆ ಜೊತೆಗೆ ಜಾಗತಿಕ ಸವಾಲುಗಳು ಕೂಡಾ ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಪದವೀಧರರ ಜವಬ್ಧಾರಿಯೂ ಹೆಚ್ಚಿದ್ದು, ಶಿಕ್ಷಣದೊಂದಿಗೆ ಆಧುನಿಕತೆಗೆ ಪೂರಕವಾಗಿ ಹೊಸ ಜ್ಞಾನಶಿಸ್ತುಗಳ ಪರಿಣಾಮಕಾರಿ ಅಧ್ಯಯನ ಅಗತ್ಯ ಎಂದು ಭಾರತದ ಜಿ.20 ಶೆರ್ಪಾ ಮತ್ತು ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಅವರು ಹೇಳಿದರು.

ಅವರು ಶನಿವಾರ ಯೆನಪೋಯ ಪರಿಗಣಿತ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು.

ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಸೇರಿದಂತೆ ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಿದ್ದು ಮತ್ತು ವಿಪುಲ ಅವಕಾಶಗಳೊಂದಿಗೆ ಬದಲಾವಣೆಗಳಿಗೂ ಕಾರಣವಾಗುತ್ತಿವೆ. ವಿದ್ಯಾರ್ಥಿಗಳು, ಯುವ ಸಮುದಾಯ ಈ ಬದಲಾವಣೆಯ ದೀಪಸ್ತಂಭ ಇದ್ದಂತೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ವಿಕ್ಸಿತ್ ಭಾರತ್' ಎಂಬ ದೂರದೃಷ್ಟಿ ಯೋಜನೆಯ ಕನಸು ನನಸಾಗಬೇಕಾದರೆ ಪದವೀಧರರು ಸೇರಿದಂತೆ ಯುವ ಸಮುದಾಯದ ಮಂದಿ ದೊಡ್ಡ ಪಾತ್ರವಹಿಸಬೇಕಾಗಿದೆ ಎಂದು ಹೇಳಿದರು.

ವೈದ್ಯಕೀಯ ಸೇರಿದಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಯೆನಪೋಯಾ ವಿಶ್ವವಿದ್ಯಾಲಯದ ಸಾಧನೆ ಮಹತ್ತರವಾದುದು. ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಬೆಳೆಸಿದ ಸಾಂವಿಧಾನಿಕ ಮೌಲ್ಯಗಳು, ಸಮಾನತೆ, ಜವಾಬ್ದಾರಿ ಮತ್ತು ನೈತಿಕ ನಾಯಕತ್ವವು, ಮುಂದಿನ ದಿನಗಳಲ್ಲಿ ಅವರ ಬದುಕಿಗೆ ದಾರಿದೀಪವಾಗಬಲ್ಲುದು ಎಂದರು.

ಯೆನಪೋಯ ಪರಿಗಣಿತ ವಿವಿಯ ಕುಲಾಧಿಪತಿ ಡಾ.ಯೆನೆಪೋಯ ಅಬ್ದುಲ್ಲಾ ಕುಂಞಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಯೆನಪೋಯ ಪರಿಗಣಿತ ವಿವಿ ಕುಲಪತಿ ಡಾ.ಎಂ.ವಿಜಯ್ ಕುಮಾರ್ ವಾರ್ಷಿಕ ವರದಿಯನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ಉಪಕುಲಪತಿ ಡಾ.ಬಿ.ಎಚ್.ಶ್ರೀಪತಿರಾವ್, ಕುಲಸಚಿವ ಡಾ.ಗಂಗಾಧರ ಸೋಮಯಾಜಿ, ಪರಿಕ್ಷಾಂಗ ಕುಲಸಚಿವ ಡಾ.ಬಿ.ಟಿ.ನಂದೀಶ್, ಯೆನೆಪೋಯ ವಿವಿಯ ಸಹಕುಲಾಧಿಪತಿ ಫರ್ಹಾದ್ ಯೆನೆಪೋಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಯೆನೆಪೋಯ ಅಬ್ದುಲ್ಲಾ ಜಾವೆದ್, ಯೆನೆಪೋಯ ಡೆಂಟಲ್ ಕಾಲೇಜ್ ಪ್ರಾಂಶುಪಾಲ ಡಾ.ಲಕ್ಷ್ಮೀಕಾಂತ್ ಚತ್ರ, ಯೆನೆಪೋಯ ಮೆಡಿಕಲ್ ಕಾಲೇಜು ಡಾ.ಎಂ.ಎಸ್ ಮೂಸಬ್ಬ, ಸದಸ್ಯರಾದ ಡಾ.ಹರಿಶ್ಚಂದ್ರ ಬಿ, ಸಿಂಧುಪ್ರಿಯಾ ಇ.ಎಸ್, ಮಹಮ್ಮದ್ ಶಾಹಿದ್, ಐಎಇ ಕಾರ್ಯದರ್ಶಿ ಡಾ.ಅಖ್ತರ್ ಹುಸೈನ್, ಡೆಂಟಲ್ ವಿಭಾಗದ ಡೀನ್ ಡಾ.ಶ್ಯಾಮ್ ಎಸ್ ಭಟ್, ಮೆಡಿಸಿನ್ ವಿಭಾಗದ ಡೀನ್ ಡಾ.ಅಭಯ್ ನಿರ್ಗುಡೆ, ನರ್ಸಿಂಗ್ ವಿಭಾಗದ ಡೀನ್ ಡಾ.ಲೀನಾ ಕೆ.ಸಿ, ಅಲೈಡ್ ಹೆಲ್ತ್ ಸೈನ್ಸಸ್ ವಿಭಾಗದ ಡೀನ್ ಡಾ.ಸುನಿತಾ ಸಲ್ದಾನ, ವಿಜ್ಞಾನ ವಿಭಾಗದ ಡೀನ್ ಡಾ.ಅರುಣ್ ,

ಫಾರ್ಮಸಿ ವಿಭಾಗದ ಡೀನ್ ಡಾ.ಮಹಮ್ಮದ್ ಗುಲ್ಜಾರ್ ಅಹ್ಮದ್, ಆರ್ಯುವೇದ ವಿಭಾಗದ ಡೀನ್ ಡಾ.ಗುರುರಾಜ , ಹೋಮಿಯೋಪತಿ ವಿಭಾಗದ ಡೀನ್ ಡಾ.ಶಿವಪ್ರಸಾದ್, ಯೋಗ ಮತ್ತು ನ್ಯಾಚುರೋಪತಿ ವಿಭಾಗದ ಡಾ.ಪುನೀತ್, ಅಕಾಡೆಮಿಕ್ ವಿಭಾಗದ ಡೀನ್ ಡಾ.ಅಶ್ವಿನಿ ದತ್, ವಿದ್ಯಾರ್ಥಿ ವಿಭಾಗದ ಡೀನ್ ಡಾ.ಮಜಿ ಜೋಸ್, ಟ್ರಸ್ಟಿ ಡಾ.ಹಬೀಬ್ ರಹಮಾನ್, ಯೆನಪೋಯ ಸ್ಕೂಲ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ.ಆರ್ ಜಿ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

ಘಟಿಕೋತ್ಸವ ಸಮಾರಂಭದಲ್ಲಿ ದಂತವೈದ್ಯ, ವೈದ್ಯಕೀಯ, ವಿಜ್ಞಾನ, ವಾಣಿಜ್ಯ ನಿರ್ವಹಣೆ ಸೇರಿದಂತೆ ವಿವಿದ ವಿಭಾಗಗಳಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್, ಸ್ನಾತಕೋತ್ತರ ಪದವಿಗಳು, ಸ್ನಾತಕೋತ್ತರ ಡಿಪ್ಲಮೋಗಳು, ಸ್ನಾತಕ ಪದವಿ ಪಡೆದ ಸುಮಾರು 2632 ಮಂದಿಗೆ ಪದವಿ ಪ್ರಮಾಣಪತ್ರ ನೀಡಲಾಯಿತು. 25 ಮಂದಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಯಿತು. ಹಾಗೂ ವಿವಿಧ ಸ್ನಾತಕಕೋರ್ಸ್ ಗಳಲ್ಲಿ ರ್ಯಾಂಕ್ ಗಳಿಸಿದ 10 ವಿದ್ಯಾರ್ಥಿಗಳಿಗೆ ಚಿನ್ನದ ಪದಕ‌ನೀಡಿ ಪುರಸ್ಕರಿಸಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X