ಯೆನೆಪೋಯ ಸಿಬಿಎಸ್‌ಇ ಸ್ಕೂಲ್ ಗೆ ಪ್ರಶಸ್ತಿ

ಮಂಗಳೂರು: ಶೈಕ್ಷಣಿಕ ಶ್ರೇಷ್ಠತೆಗಾಗಿ ಯೆನೆಪೋಯ ಶಾಲೆ ಅತ್ಯುತ್ತಮ ಸಿಬಿಎಸ್‌ಇ ಸ್ಕೂಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ನಗರದ ಟಿ.ಎಂ.ಎ.ಪೈ ಸಭಾಂಗಣದಲ್ಲಿ ನಡೆದ ಈಟಿ ನೌವ್ ಬ್ಯುಸಿನೆಸ್ ಕಾನ್ಕ್ಲೇವ್ ಪ್ರಶಸ್ತಿ-2025 ಪ್ರದಾನ ಸಮಾರಂಭದಲ್ಲಿ ಯೆನಪೋಯ ಶಿಕ್ಷಣ ಸಂಸ್ಥೆಗೆ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ.
ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಪ್ರಶಸ್ತಿ ವಿತರಿಸಿದರು.ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಸ್ತಿಯು ಅತ್ಯುತ್ತಮ ಶೈಕ್ಷಣಿಕ ಕಾರ್ಯಕ್ಷಮತೆ, ನವೀನ ಶಿಕ್ಷಣಶಾಸ್ತ್ರ ಮತ್ತು ಸಮಗ್ರ ವಿದ್ಯಾರ್ಥಿ ಅಭಿವೃದ್ಧಿಗೆ ಬದ್ಧತೆಯನ್ನು ಪ್ರದರ್ಶಿಸುವ ಸಂಸ್ಥೆಗಳಿಗೆ ನೀಡಲಾಗುತ್ತದೆ. ಯೆನೆಪೋಯ ಶಾಲೆಯು ಸ್ಥಿರವಾದ ಮಂಡಳಿಯ ಫಲಿತಾಂಶಗಳು, ಮುಂದಾಲೋಚನೆಯ ಪಠ್ಯಕ್ರಮ ಮತ್ತು ಪೋಷಿಸುವ ಕಲಿಕಾ ವಾತಾವರಣದ ಮೂಲಕ ಗುರುತಿಸಿಕೊಂಡಿದೆ.
ಶಾಲೆಯ ಕಾರ್ಯಾಚರಣೆ ಮತ್ತು ಶೈಕ್ಷಣಿಕ ನಿರ್ದೇಶಕಿ ಮಿಸ್ರಿಯಾ ಜಾವೀದ್ ಈ ಸಂದರ್ಭದಲ್ಲಿ ಮಾತನಾಡಿ ‘‘25ನೇ ವರ್ಷಕ್ಕೆ ಕಾಲಿಡುತ್ತಿರುವ ಯೆನೆಪೋಯ ಸಿಬಿಎಸ್‌ಇ ಸ್ಕೂಲ್‌ನ್ನು ಗುರುತಿಸಿ ಪ್ರಶಸ್ತಿ ನೀಡಿದಕ್ಕಾಗಿ ನಮಗೆ ಸಂತೋಷವಾಗಿದೆ. ಈ ಪ್ರಶಸ್ತಿಯು ಪ್ರತಿ ಮಗುವಿನಲ್ಲೂ ಶ್ರೇಷ್ಠತೆಯನ್ನು ಬೆಳೆಸುವುದನ್ನು ಮುಂದುವರಿಸಲು ನಮಗೆ ಸ್ಫೂರ್ತಿ ನೀಡಲಿದೆ. ಈ ಗೌರವವು ನಮ್ಮ ಇಡೀ ಶಾಲಾ ಸಮುದಾಯಕ್ಕೆ - ನಮ್ಮ ಸಮರ್ಪಿತ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಬೆಂಬಲ ನೀಡುವ ಅವರ ಹೆತ್ತವರಿಗೆ ಸೇರಿದೆ ’’ ಎಂದು ಹೇಳಿದ್ದಾರೆ.







