ಯೆಯ್ಯಾಡಿ | ಕಾರು ಢಿಕ್ಕಿ : ವ್ಯಕ್ತಿ ಮೃತ್ಯು

ಸಾಂದರ್ಭಿಕ ಚಿತ್ರ
ಮಂಗಳೂರು, ಡಿ.15: ನಗರದ ಯೆಯ್ಯಾಡಿ ಎಂಬಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ.
ಯೆಯ್ಯಾಡಿಯ ನಿವಾಸಿ ಫೆಡ್ರಿಕ್ ಅಲ್ವಿನ್ ಫೆರ್ನಾಂಡಿಸ್ ಮೃತಪಟ್ಟ ವ್ಯಕ್ತಿ. ಇವರು ಶನಿವಾರ ಸಂಜೆ 6:30ಕ್ಕೆ ಯೆಯ್ಯಾಡಿಯ ತನ್ನ ಫ್ಲ್ಯಾಟ್ನಿಂದ ಮುಂಭಾಗದಲ್ಲಿರುವ ಅಂಗಡಿಗೆ ಹಾಲು ತರಲೆಂದು ರಸ್ತೆ ದಾಟಿ ಹೋಗುತ್ತಿದ್ದಾಗ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ಬಂದ ಕಾರು ಢಿಕ್ಕಿ ಹೊಡೆಯಿತು ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡ ಫೆಡ್ರಿಕ್ ರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಿಸಿರುವ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
Next Story





