ಮಳ್‌ಹರ್ ವಿದ್ಯಾಸಂಸ್ಥೆಯ ಮುಂಬೈ ಘಟಕದ 10ನೇ ಸ್ವಲಾತ್ ವಾರ್ಷಿಕ ಕಾರ್ಯಕ್ರಮ

ಮುಂಬೈ: ಮಂಜೇಶ್ವರದ ಮಳ್‌ಹರ್ ವಿದ್ಯಾಸಂಸ್ಥೆಯ ಮುಂಬೈ ಘಟಕದ 10ನೇ ಸ್ವಲಾತ್ ವಾರ್ಷಿಕ ಕಾರ್ಯಕ್ರಮವು ದಾದರ್ ಪೂರ್ವದ ಲತೀಫಿಯ್ಯಾ ಸುನ್ನಿ ಮಸ್ಜಿದ್ ನಲ್ಲಿ ನಡೆಯಿತು.
ಎಸ್ ಜೆ ಎಂ ಮಹಾರಾಷ್ಟ್ರ ರಾಜ್ಯಾಧ್ಯಕ್ಷ ಮುಫ್ತಿ ರಫೀಕ್ ಸಅದಿ ಸ್ವಲಾತ್ ಮಜ್ಲಿಸ್ ಗೆ ಚಾಲನೆ ನೀಡಿದರು. ಮೊಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡಿದರು. ಮಳ್‌ಹರ್ ವಿದ್ಯಾಸಂಸ್ಥೆಯ ಅಧ್ಯಕ್ಷ ಸೈಯ್ಯದ್ ಅಬುರ್ರಹ್ಮಾನ್ ಶಹೀರ್ ತಂಙಳ್ ಸ್ವಲಾತ್ ಮಜ್ಲಿಸ್ ನೇತೃತ್ವ ವಹಿಸಿದ್ದರು.
ಲತೀಫಿಯ್ಯಾ ಸುನ್ನಿ ಮಸ್ಜಿದ್ ಖತೀಬ್ ಅಬ್ದುಲ್ ಕರೀಂ ಅಶ್ರಫಿ, ಬಿಕೆಸಿ ಮಸೀದಿಯ ಖತೀಬ್ ಹಫೀಝ್ ಅರೀಫ್ ರಝಾ ಅಲೀಮಿ, ನಲ್ಲಸೋಪರ ಮಸೀದಿ ಖತೀಬ್ ಸರ್ಫರಾಝ್ ಅಹ್ಮದ್ ಸಖಾಫಿ ಅಲ್-ಅಝಾರಿ, ಕೆಸಿಎಫ್ ಇಂಟರ್ನ್ಯಾಷನಲ್ ನ ಮಾಜಿ ಅಧ್ಯಕ್ಷ ಶೇಖ್ ಬಾವ, ಹಸನ್ ಮುಸ್ಲಿಯಾರ್ ಮುಂಬ್ರಾ, ಮಳ್‌ಹರ್ ಮುಂಬೈ ಸಮಿತಿ ಸಂಚಾಲಕರಾದ ಅಶ್ರಫ್ ಬೋಲ್ಮಾರ್, ಸತ್ತಾರ್ ಬದ್ರಿಯಾ, ಮಳ್‌ಹರ್ ಮುಂಬೈ ಸಮಿತಿಯ ಅಧ್ಯಕ್ಷ ಮುಸ್ತಾಫ ಪೂಪಾ, ಲ್ಯಾಡಿಎಫ್ ಮುಖಂಡ ಮುಸ್ತಾಫ ಕಂಡಂಬಾರ್, ಹರೀಸ್ ಹಾಜಿ ಉಪಸ್ಥಿತರಿದ್ದರು.
ಮಳ್‌ಹರ್ ಮುಂಬೈ ಸಮಿತಿ ಸಂಚಾಲಕ ಸಿದ್ದೀಕ್ ಮೌಲಾನ ಮಳ್‌ಹರ್ ಮುಂಬೈ ಸಮಿತಿ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮಂಜೇಶ್ವರ ಮಳ್‌ಹರ್ ಬುಖಾರಿ ಮಸೀದಿಯ ಖತೀಬ್ ಝುಬೈರ್ ಸಖಾಫಿ ಓಟ್ಟೋಳಿ ಸ್ವಾಗತಿಸಿದರು. ಮಳ್‌ಹರ್ ಮುಂಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತೌಡುಗೋಳಿ ವಂದಿಸಿದರು. ಸಂಚಾಲಕ ಹಕೀಂ ಅಂಜದಿ ಕಾರ್ಯಕ್ರಮ ನಿರೂಪಿಸಿದರು.
ಸ್ವಲಾತ್ ವಾರ್ಷಿಕ ಸಮಿತಿಯ ಅಧ್ಯಕ್ಷ ಸೈಯದ್ ಸೈದಾಲವಿ ಅವರು ಮುಂಬೈಯ ದಾದರ್ ಪಶ್ಚಿಮದ ಪೀರ್ ಸಯ್ಯದ್ ಫತ್ ಅಲಿ ಅಫಂದಿ ಬಿನ್ ಫೀರ್ ಬಾಗ್ದಾದ್ ಬಾಬಾ ಅವರ ದರ್ಗಾ ಝೀಯಾರತ್ ಗೆ ನೇತೃತ್ವ ವಹಿಸಿದ್ದರು.







