ಬಿಹಾರ ಎಸ್ಐಆರ್ಗೆ 11 ದಾಖಲೆಗಳು ಅರ್ಹ: ʼಮತದಾರ ಸ್ನೇಹಿʼ ಎಂದ ಸುಪ್ರೀಂ ಕೋರ್ಟ್

Photo credit: PTI
ಹೊಸದಿಲ್ಲಿ : ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ಗಾಗಿ ಮತದಾರರಿಗೆ 11 ದಾಖಲೆಗಳು ಸಲ್ಲಿಕೆಗೆ ಅವಕಾಶವಿದೆ. ಈ ಹಿಂದೆ ನಡೆಸಿದ ಸಾರಾಂಶ ಪರಿಷ್ಕರಣೆಯಲ್ಲಿ ಏಳು ದಾಖಲೆಗಳನ್ನು ಮಾತ್ರ ಅರ್ಹವೆಂದು ಪರಿಗಣಿಸಲಾಗಿತ್ತು. ಆದ್ದರಿಂದ ಇದು "ಮತದಾರ ಸ್ನೇಹಿ" ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಗಾಗಿ ಮತದಾರರಿಗೆ 11 ದಾಖಲೆಗಳನ್ನು ಸಲ್ಲಿಸಲು ಅವಕಾಶವಿದೆ.
ಎಸ್ಐಆರ್ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿರುವ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಗ್ಚಿ ಅವರ ಪೀಠ, ಆಧಾರ್ ಅನ್ನು ಸ್ವೀಕರಿಸದಿರುವುದು “ಹೊರಗಿಡುವ ಕ್ರಮ” ಎಂಬ ಅರ್ಜಿದಾರರ ವಾದಗಳ ಹೊರತಾಗಿಯೂ, ಹೆಚ್ಚಿನ ಸಂಖ್ಯೆಯ ದಾಖಲೆಗಳು "ವಾಸ್ತವವಾಗಿ ಸೇರ್ಪಡೆಯ ಕ್ರಮ" ಎಂದು ತೋರುತ್ತಿದೆ ಎಂದು ಹೇಳಿದೆ.
ಹಿಂದಿನ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ 7 ದಾಖಲೆಗಳ ಪಟ್ಟಿಯನ್ನು ನೀಡಲಾಗಿತ್ತು. ಆದರೆ, ಬಿಹಾರದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣಾ (SIR) ಪ್ರಕ್ರಿಯೆಗೆ 11 ದಾಖಲೆಗಳನ್ನು ಒದಗಿಸುವ ವ್ಯವಸ್ಥೆ ಇದೆ ಎಂದು ಕೋರ್ಟ್ ಹೇಳಿದೆ.
ಮತದಾರರು ಪಟ್ಟಿಯಲ್ಲಿರುವ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.





