12 Su-30 MKI ಫೈಟರ್ ಜೆಟ್ ವಿಮಾನಗಳ ಖರೀದಿಗೆ ಎಚ್ಎಎಲ್ ಗೆ ವಾಯು ಪಡೆ ಟೆಂಡರ್

12 Su-30 MKI | Photo: PTI
ಹೊಸದಿಲ್ಲಿ : ಭಾರತೀಯ ವಾಯು ಪಡೆ 12 ಸುಧಾರಿತ Su&30MKI ಫೈಟರ್ ಜೆಟ್ ವಿಮಾನ ಖರೀದಿಸಲು ಸರಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್ಎಎಲ್)ಗೆ ಟೆಂಡರ್ ನೀಡಿದೆ.
‘‘ರಶ್ಯ ಮೂಲದ ಉಪಕರಣಗಳ ತಯಾರಕರ ಸಹಭಾಗಿತ್ವದಲ್ಲಿ ಎಚ್ಎಎಲ್ ಭಾರತದಲ್ಲಿ ತಯಾರಿಸುವ 12 Su&30MKI ಫೈಟರ್ ಜೆಟ್ ವಿಮಾನಗಳನ್ನು ಖರೀದಿಸಲು ಎಚ್ಎಎಲ್ ಗೆ ಇತ್ತೀಚೆಗೆ ಟೆಂಡರ್ ನೀಡಲಾಗಿದೆ’’ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಇತರ ವಿವರಗಳೊಂದಿಗೆ ಯೋಜನೆಯ ವಿವರಗಳನ್ನು ಮುಂದಿನ ತಿಂಗಳ ಒಳಗೆ ನೀಡುವ ಮೂಲಕ ಎಚ್ಎಲ್ ಟೆಂಡರ್ಗೆ ಪ್ರತಿಕ್ರಿಯಿಸಲಿದೆ ಎಂದು ಅದು ಹೇಳಿದೆ.
Next Story





