ದಿಲ್ಲಿ ಪುರಸಭೆಯ 15 ಸದಸ್ಯರು ಆಪ್ ಪಕ್ಷಕ್ಕೆ ರಾಜೀನಾಮೆ; ಹೊಸ ಪಕ್ಷ ಘೋಷಣೆ

Photo credit: NDTV
ಹೊಸದಿಲ್ಲಿ : ದಿಲ್ಲಿ ಪುರಸಭೆಯ 15 ಸದಸ್ಯರು ಆಪ್ ಪಕ್ಷಕ್ಕೆ ರಾಜೀನಾಮೆ ನೀಡಿ ʼಇಂದ್ರಪ್ರಸ್ಥ ವಿಕಾಸ್ ಪಕ್ಷʼ ಎಂಬ ಪ್ರತ್ಯೇಕ ರಾಜಕೀಯ ಪಕ್ಷವನ್ನು ರಚಿಸುವುದಾಗಿ ಘೋಷಿಸಿದ್ದಾರೆ.
ಇಂದ್ರಪ್ರಸ್ಥ ವಿಕಾಸ್ ಪಕ್ಷವನ್ನು ಹೇಮಚಂದ್ ಗೋಯೆಲ್ ಮುನ್ನಡೆಸಲಿದ್ದಾರೆ. ಮುಖೇಶ್ ಗೋಯೆಲ್, ಹಿಮಾನಿ ಜೈನ್, ದೇವೀಂದ್ರ ಕುಮಾರ್, ರಾಜೇಶ್ ಕುಮಾರ್ ಲಾಡಿ, ಸುಮನ್ ಅನಿಲ್ ರಾಣಾ, ದಿನೇಶ್ ಭಾರದ್ವಾಜ್, ರುಣಾಕ್ಷಿ ಶರ್ಮಾ, ಮನೀಷಾ, ಸಾಹಿಬ್ ಕುಮಾರ್, ರಾಖಿ ಯಾದವ್, ಉಷಾ ಶರ್ಮಾ ಮತ್ತು ಅಶೋಕ್ ಪಾಂಡೆ ಪಕ್ಷದಲ್ಲಿ ಪ್ರಮುಖ ಜವಾಬ್ಧಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಮುಖೇಶ್ ಗೋಯೆಲ್ ನಿರ್ಗಮನವು ಆಪ್ ಪಕ್ಷಕ್ಕೆ ದೊಡ್ಡ ಹಿನ್ನೆಡೆಯಾಗಿದೆ. ಅವರು ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ನಲ್ಲಿ ಆಪ್ ಪಕ್ಷದ ಸದನ ನಾಯಕರಾಗಿ ಸೇವೆ ಸಲ್ಲಿಸಿದ್ದರು.
ಕಳೆದ ಒಂದು ಅಥವಾ ಎರಡು ವರ್ಷಗಳಿಂದ ಯಾವುದೇ ಸಾರ್ವಜನಿಕ ಕೆಲಸಗಳನ್ನು ಮಾಡಲು ಸಾಧ್ಯವಾಗದ ಕಾರಣ ನಾವು ಇಂದ್ರಪ್ರಸ್ಥ ವಿಕಾಸ್ ಪಕ್ಷವನ್ನು ಪ್ರಾರಂಭಿಸಿದ್ದೇವೆ. ಹೆಚ್ಚಿನ ಕೌನ್ಸಿಲರ್ಗಳು ತಮ್ಮ ಹೊಸ ಪಕ್ಷಕ್ಕೆ ಸೇರಲಿದ್ದಾರೆ ಎಂದು ಮುಖೇಶ್ ಗೋಯೆಲ್ ಹೇಳಿದ್ದಾರೆ.





