ಜೆಎನ್.1ನ 157 ಪ್ರಕರಣಗಳು ದಾಖಲು: ಐಎನ್ಎಸ್ಎಸಿಒಜಿ

Photo: PTI
ಹೊಸದಿಲ್ಲಿ: ಐಎನ್ಎಸ್ಎಸಿಒಜಿಯ ಇತ್ತೀಚೆಗಿನ ದತ್ತಾಂಶದ ಪ್ರಕಾರದ ದೇಶದಲ್ಲಿ ಕೋವಿಡ್ ನ ಉಪ ಪ್ರಬೇಧ ಜೆಎನ್.1ನ 157 ಪ್ರಕರಣಗಳು ದಾಖಲಾಗಿವೆ.
ಕೇರಳದಲ್ಲಿ ಅತ್ಯಧಿಕ 78 ಹಾಗೂ ಅನಂತರ ಗುಜರಾತ್ನಲ್ಲಿ 34 ಪ್ರಕರಣಗಳು ದಾಖಲಾಗಿವೆ.
9 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ನ ಜೆಎನ್.1 ಉಪ ಪ್ರಬೇಧ ಕಂಡು ಬಂದಿದೆ. ಕೇರಳ, ಗುಜರಾತ್ ಹಾಗೂ ಗೋವಾದಲ್ಲಿ ಒಟ್ಟು 18 ಪ್ರಕರಣಗಳು, ಕರ್ನಾಟಕದಲ್ಲಿ 8, ಮಹಾರಾಷ್ಟ್ರ ಹಾಗೂ ರಾಜಸ್ಥಾನದಲ್ಲಿ ಅನುಕ್ರಮವಾಗಿ 7,5, ತಮಿಳುನಾಡು, ತೆಲಂಗಾಣ ಹಾಗೂ ದಿಲ್ಲಿಯಲ್ಲಿ ಅನುಕ್ರಮವಾಗಿ 4, 2, 1 ಪ್ರಕರಣಗಳು ವರದಿಯಾಗಿವೆ.
Next Story





