ಉತ್ತರ ಪ್ರದೇಶ | ವಿಧಾನಸಭೆಯೊಳಗೆ ಬಿಜೆಪಿ ಶಾಸಕರಿಬ್ಬರ ಮಧ್ಯೆ ವಾಗ್ವಾದ : ವೀಡಿಯೊ ವೈರಲ್

Screengrab:X/@yadavakhilesh
ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಬಿಜೆಪಿಯ ಇಬ್ಬರು ಶಾಸಕರ ನಡುವಿನ ಮಾತಿನ ಚಕಮಕಿಯ ವೀಡಿಯೊ ವೈರಲ್ ಆಗಿದೆ.
'ವಿಷನ್ 2047' ಕುರಿತ ಚರ್ಚೆಯ ಸಂದರ್ಭದಲ್ಲಿ ಮಥುರಾದ ಬಿಜೆಪಿ ಶಾಸಕ ರಾಜೇಶ್ ಚೌಧರಿ ಅವರು ವಾರಣಾಸಿ ಶಾಸಕ ಸೌರಭ್ ಶ್ರೀವಾಸ್ತವ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಈ ವೇಳೆ ಇತರ ಶಾಸಕರು ವಾಗ್ವಾದದಲ್ಲಿ ತೊಡಗಿರುವ ಇಬ್ಬರು ಶಾಸಕರನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಪರವಾಗಿ ಮಾತನಾಡುವ ವಿಚಾರಕ್ಕೆ ವಾಗ್ವದ ನಡೆದಿದೆ ಎಂದು ಹೇಳಲಾಗಿದೆ. ವಾರಣಾಸಿ ಶಾಸಕ ಸೌರಭ್ ಶ್ರೀವಾಸ್ತವ ಅವರು ತಮ್ಮ ಹೆಸರನ್ನು ಸ್ಪೀಕರ್ಗೆ ರವಾನಿಸುತ್ತಿಲ್ಲ ಶಾಸಕ ಚೌಧರಿ ಆರೋಪಿಸಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತ ವೀಡಿಯೊ ಹಂಚಿಕೊಂಡ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಅಸಭ್ಯ ವರ್ತನೆ ಮತ್ತು ಅಸಭ್ಯ ಭಾಷೆ ಬಳಸುವ ನಾಯಕರನ್ನು ಬಿಜೆಪಿ ಪ್ರೋತ್ಸಾಹಿಸುತ್ತದೆ ಎಂದು ಟೀಕಿಸಿದ್ದಾರೆ.
बदसलूकी और बदज़ुबानी ही भाजपा में तरक़्की की सीढ़ी है।
— Akhilesh Yadav (@yadavakhilesh) August 14, 2025
निंदनीय! pic.twitter.com/uUxQd61sGc







