ಒಡಿಶಾ | ಮಹಿಳೆ ಸಹಿತ ಮೂವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಗ್ರಾಮಸ್ಥರು

Photo | ndtv
ಭುವನೇಶ್ವರ : ಒಡಿಶಾ ಗ್ರಾಮವೊಂದರಲ್ಲಿ ಅನೈತಿಕ ಸಂಬಂಧ ಶಂಕಿಸಿ ಇಬ್ಬರು ಯುವಕರು ಮತ್ತು ಓರ್ವ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿರುವ ಬಗ್ಗೆ ವರದಿಯಾಗಿದೆ.
ಕಾಶಿಪುರ ಗ್ರಾಮದ ವಿವಾಹಿತ ಮಹಿಳೆ ಇಬ್ಬರು ಯುವಕರೊಂದಿಗೆ ಮಯೂರ್ಭಂಜ್ ಜಿಲ್ಲೆಯ ಜಶಿಪುರ ಮಾರುಕಟ್ಟೆಗೆ ಬೈಕ್ನಲ್ಲಿ ಹೋಗಿದ್ದರು. ಅವರು ಹಿಂತಿರುಗುವಾಗ ಮಹಿಳೆಯ ಕುಟುಂಬದ ಸದಸ್ಯರು ಅವರನ್ನು ಗಮನಿಸಿದ್ದಾರೆ.
ಮಹಿಳೆಗೆ ಇಬ್ಬರು ಯುವಕರಲ್ಲಿ ಓರ್ವನ ಜೊತೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿದ ಕುಟುಂಬಸ್ಥರು ಮೂವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಈ ಕುರಿತ ವೀಡಿಯೊ ಕೂಡ ವೈರಲ್ ಆಗಿದೆ.
ಪೊಲೀಸರು ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
Next Story





