ಎಸ್ಐಆರ್ ಅವಾಂತರ: ಒಂದು ಮನೆಯಲ್ಲಿ 233 ಮಂದಿ ವಾಸ!

PC: ndtv
ಗೋರಖ್ಪುರ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕರಡಿನ ಮಾಹಿತಿ ಪ್ರಕಾರ ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯ ಒಂದು ಮನೆಯಲ್ಲಿ 233 ಮಂದಿ ವಾಸವಿದ್ದಾರೆ. ಹಿಂದೂ, ಮುಸ್ಲಿಂ ಹಾಗೂ ಸಿಕ್ಖರು ಸೇರಿದಂತೆ ವಿವಿಧ ಧರ್ಮಗಳಿಗೆ ಸೇರಿದವರು ಕುಟುಂಬದಲ್ಲಿದ್ದಾರೆ!
ಸ್ಥಳೀಯ ಬಿಜೆಪಿ ಜನಪ್ರತಿನಿಧಿ ಈ ಪ್ರಮಾದವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಜತೆಗೆ ಇದರಿಂದ ಹಲವು ಅನಾನುಕೂಲತೆಗಳು ಆಗುತ್ತಿವೆ ಎಂದು ಹೇಳಿದ್ದಾರೆ. ನಿಖರ ಮಾಹಿತಿಯನ್ನು ಪಡೆದುಕೊಳ್ಳುವುದು ಚುನಾವಣಾ ಆಯೋಗದ ಹೊಣೆಗಾರಿಕೆ ಎಂದು ಸ್ಥಳೀಯರು ಹೇಳಿದ್ದಾರೆ.
ನೇಪಾಳದ ಗಡಿಗೆ ಹೊಂದಿಕೊಂಡಿರುವ ಈ ಜಿಲ್ಲೆಯ ಪರಿಷ್ಕøತ ಮತದಾರರ ಪಟ್ಟಿಯ ಕರಡನ್ನು ಜನವರಿ 6ರಂದು ಬಿಡುಗಡೆ ಮಾಡಲಾಗಿತ್ತು. ಮಾಹಿತಿ ಸಂಗ್ರಹಕಾರರ ನಿರ್ಲಕ್ಷ್ಯದಿಂದಾಗಿ 6.45 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಮಾಯವಾಗಿದೆ ಎನ್ನುವುದು ಸ್ಥಳೀಯರ ಆರೋಪ. ಆಕ್ಷೇಪಣೆಗಳನ್ನು ಮತ್ತು ಕ್ಲೇಮ್ಗಳನ್ನು ಸಲ್ಲಿಸಲು ಫೆಬ್ರುವರಿ 6ರವರೆಗೆ ಅವಕಾಶವಿದೆ.
ಗೋರಖ್ಪುರದ 16ನೇ ವಾರ್ಡ್ನ ಕರಡು ಮತಪಟ್ಟಿಯಲ್ಲಿ ಒಂದೇ ಮನೆಯಲ್ಲಿ 233 ಜನ ಇದ್ದಾರೆ ಎಂಬ ಮಾಹಿತಿ ಇದೆ. ಇತರ ವಾರ್ಡ್ಗಳಲ್ಲೂ ಇಂಥದ್ದೇ ನಿದರ್ಶನಗಳು ಸಾಕಷ್ಟಿವೆ. ತಕ್ಷಣವೇ ಆಯೋಗ ಈ ಪ್ರಮಾದಗಳನ್ನು ಸರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.







